ಕಲುಬುರಗಿ: ನಾವು ಎಷ್ಟೇ ಅವರ ಪರ ಕೆಲಸ ಮಾಡಿದ್ರು ಮುಸ್ಲಿಮರು ನಮಗೆ ಮತ ಹಾಕಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ. ಕಲುಬುರಗಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಅಲ್ಲಿನ ಮುಸ್ಲಿಂ ಮತಗಳ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಯೋಗೇಶ್ವರ್ಗೆ ಮುನ್ನಡೆ ಇರಬೇಕು. ನಾವು ಎಷ್ಟೇ ಅವರ ಪರ ಕೆಲಸ ಮಾಡಿದ್ರು ಮುಸ್ಲಿಮರು ನಮಗೆ ಮತ ಹಾಕಲ್ಲ.
PM Kisan tractor: ಟ್ರಾಕ್ಟರ್ ಖರೀದಿಸುವ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ಭರ್ಜರಿ ಸಬ್ಸಡಿ! ಇಂದೇ ಅರ್ಜಿ ಸಲ್ಲಿಸಿ
ಶಿಗ್ಗಾಂವಿ ನಗರದಲ್ಲೂ ಮುಸ್ಲಿಂ ಮತಗಳು ಹೆಚ್ಚಾಗಿದೆ. ಓಲೈಕೆ ನಾವು ಮಾಡಲ್ಲ ಹಾಗಾಗಿ ಅವರು ನಮಗೆ ಮತ ಹಾಕಲ್ಲ. ತೀರ್ಪು ಏನೇ ಬಂದರೂ ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೇವೆ. ಆದ್ರೆ ಕಾಂಗ್ರೆಸ್ ಮೂರು ಗೆದ್ದರೆ ಜನಾದೇಶ ಅಂತಾರೆ. ಬರಲಿಲ್ಲ ಅಂದ್ರೆ ಇವಿಎಂ ದೋಷ ಅಂತಾ ಹೇಳ್ತಾರೆ ಎಂದು ಹೇಳಿದ್ದಾರೆ.