ಮಡಿಕೇರಿ:- ಅಲ್ಲಾಗೂ ಭಾರತಕ್ಕೂ ಏನು ಸಂಬಂಧ!? ನೆಲೆ ಹುಡುಕಿ ಬಂದವರು ನೀವು ಎಂದು ಹೇಳುವ ಮೂಲಕ ಜಮೀರ್ ಗೆ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.
ಚಳಿಗಾಲದಲ್ಲಿ ಹೃದಯಾಘಾತ ಕೇಸ್ ಹೆಚ್ಚಳ: ಇದರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ!
ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 1 ವರ್ಷ ಆರು ತಿಂಗಳಾಯ್ತು. 2023ರ ಚುನಾವಣೆ ಸಂದರ್ಭದಲ್ಲೇ ನಾವು ಹೇಳಿದ್ದೆವು. ಕಾಂಗ್ರೆಸ್ ಬಂದ್ರೆ ಸ್ಥಾಪನೆ ಆಗೋದು ತಾಲಿಬಾನ್ ಸರ್ಕಾರ ಅಂತ, ಅದು ಈಗ ನಿಜ ಆಗ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ವಕ್ಫ್ ಆಸ್ತಿ ಅಲ್ಲಾನ ಆಸ್ತಿ ಎಂಬ ಸಚಿವ ಜಮೀರ್ ಹೇಳಿಕೆ ಕುರಿತು ಮಾತನಾಡಿ, ಅಲ್ಲಾಗೂ ಭಾರತಕ್ಕೂ ಏನು ಸಂಬಂಧ? ನೀವು ನೆಲೆ ಹುಡುಕಿಕೊಂಡು ಭಾರತಕ್ಕೆ ಬಂದವರು. ನಿಮಗೂ ಭಾರತಕ್ಕೂ ಯಾವುದೇ ಸಂಬಂಧ ಇಲ್ಲ. ನಿಮಗೆ ಇಲ್ಲಿ ಯಾವ ಹಿನ್ನೆಲೆಯೂ ಇಲ್ಲ. ನಿಮ್ಮ ಧರ್ಮದ ಯಾವುದೇ ಕುರುಹುಗಳೂ ಇಲ್ಲಿಲ್ಲ. ಮುಸ್ಲಿಮರಲ್ಲೂ ಜಾತಿಗಳು ಸಾಕಷ್ಟು ಇವೆ. ಆದ್ರೆ ಧರ್ಮ ಅಂತ ಬಂದ್ರೆ ಎಲ್ಲಾರೂ ಒಟ್ಟಾಗಿ ಇರುತ್ತಾರೆ, ಆದ್ದರಿಂದ ಹಿಂದೂಗಳು ಒಟ್ಟಾಗಬೇಕು ಎಂದು ಕರೆ ನೀಡಿದರು
ಇನ್ನೂ ಶನಿವಾರ ರಾಜ್ಯದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಮೈತ್ರಿ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.