ಬೆಂಗಳೂರು: ಅದು ಗಂಡ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದ ಸುಂದರ ಸಂಸಾರ..ಜಾರ್ಖಾಂಡ್ ಮೂಲದ ಈ ದಂಪತಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ರು..ಆದ್ರೆ ಪತಿ ಪತ್ನಿ ನಡುವಿನ ಜಗಳ ಇಬ್ಬರು ಪುಟ್ಟ ಮಕ್ಕಳನ್ನ ಬಲಿ ಪಡೆದಿದೆ..ಹೆತ್ತ ಕರುಳೇ ಮುದ್ದು ಮಕ್ಕಳ ಹೆಣ ಉರುಳಿಸಿದೆ..ಈ ಕಂಪ್ಲೇಂಟ್ ಸ್ಟೋರಿ.. ಹೌದು..ಜಾರ್ಖಾಂಡ್ ಮೂಲದ ಸುನಿಲ್ ಸಾಹು ಹಾಗೂ ಮಮತಾ ಸಾಹು ದಂಪತಿ ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಮಾಡಿಕೊಂಡಿದ್ರು..
ಸುನಿಲ್ ಸಾಹು ಆಟೋ ಓಡಿಸಿಕೊಂಡಿದ್ರೆ ಮಮತಾ ಗೃಹಿಣಿಯಾಗಿದ್ಳು..ಹೀಗಿರಬೇಕಾದ್ರೆ ಪತ್ನಿಗೆ ಪತಿ ಮೇಲೆ ಅನುಮಾನ…ಜಾರ್ಖಾಂಡ್ ಮೂಲದ ಮಹಿಳೆ ಜೊತೆಗೆ ಫೋನಲ್ಲಿ ಮಾತಾಡ್ತಾನೆ ಅನ್ನೋ ಸಂಶಯ ಇತ್ತು..ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೀತಿತ್ತು..ಅದ್ರಂತೆ ನವಂಬರ್ 21 ರ ಸಂಜೆ ಕೂಡ ಗಲಾಟೆ ಆಗಿದೆ.
Black Pepper Side Effects: ಕರಿಮೆಣಸು ಅತಿಯಾಗಿ ಸೇವಿಸುವುದರಿಂದ ಆಗುವ ಸೈಡ್ ಎಫೆಕ್ಟ್ʼಗಳೇನು ಗೊತ್ತಾ..?
ಲಾಟೆ ಬಳಿಕ ಸಂಜೆ 7.30 ಕ್ಕೆ ಸರಿಯಾಗಿ ಗಂಡ ಸುನಿಲ್ ಸಾಹು ಆಟೋ ತೆಗೆದುಕೊಂಡು ಕೆಲಸಕ್ಕೆ ಹೋಗಿದ್ದಾನೆ.ಹೀಗೆ ಹೋದವನಿಗೆ 9.45 ರ ಸುಮಾರಿಗೆ ಬಂದ ಅದೊಂದು ಫೋಟೊ ನಿಂತಲ್ಲೇ ನಡುಗುವಂತೆ ಮಾಡಿತ್ತು..ಯಾಕಂದ್ರೆ ಆ ಸೆಲ್ಫಿ ಫೋಟೊ ಅಷ್ಟೊಂದು ಭಯಾನಕವಾಗಿತ್ತು..ಮನೆಗೆ ಬಂದು ನೋಡಿದ ಪತಿ ಸುನೀಲ್ ಗೆ ಕಂಡಿದ್ದು ಮಾತ್ರ ಭಯಾನಕ..
ಇಬ್ಬರು ಮಕ್ಕಳು ಕುತ್ತಿಗೆ ಬಿಗಿದು ಕೊಲೆ ಮಾಡಿದ ಸ್ಥತಿಯಲ್ಲಿದ್ರೆ ಪತ್ನಿ ಕತ್ತು ಸೀಳಿತ್ತು..ಹಿಂದೂ ಮುಂದು ನೋಡದೆ ಪತ್ನಿಯನ್ನ ಮೊದಲು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾನೆ..ಬಳಿಕ ಏನಾಯ್ತು ಅಂತಾ ತಿಳಿತಿದ್ದಂತೆ ಬೆಚ್ಚಿಬಿದ್ದಿದ್ದ..ಯಾಕಂದ್ರೆ ಗಂಡನ ಮೇಲಿನ ಕೋಪಕ್ಕೆ ಪತ್ನಿಯೇ ಇಬ್ಬರು ಮಕ್ಕಳನ್ನ ಸೆಣಬಿನ ದಾರದಿಂದ ಕತ್ತು ಬಿಗಿದು ಕೊಲೆ ಮಾಡಿ ನಂತರ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ..
ಆದ್ರೆ ದಾರ ತುಂಡಾಗಿ ಕೆಳಗೆ ಬಿದ್ದಿದ್ದಾಳೆ. ಬಳಿಕ ಮನೆಯಲ್ಲಿದ್ದ ಚಾಕುವಿನಿಂದ ಕತ್ತು ಕೊಯ್ದುಕೊಂಡಿದ್ದಾಳೆ..ಆದ್ರೆ ಪ್ರಾಣ ಹೋಗಿರಲಿಲ್ಲ.. ಸದ್ಯ ಮಮತಾ ಸಾಹು ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ..ಪ್ರಕರಣ ದಾಖಲಿಸಿಕೊಂಡಿರೊ ಸುಬ್ರಹ್ಮಣ್ಯಪುರ ಪೊಲೀಸರು ತನಿಖೆ ನಡೆಸ್ತಿದ್ದಾರೆ..