ಬೆಂಗಳೂರು: ಸಚಿವ ಜಮೀರ್ʼಗೆ ಕಾನೂನು ಪ್ರಕಾರ ವಕ್ಫ್ ಅದಾಲತ್ ಮಾಡಲು ಅವಕಾಶ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಜಮೀರ್ ಖಾನ್ ಗೆ ಕಾನೂನು ಪ್ರಕಾರ ವಕ್ಫ್ ಅದಾಲತ್ ಮಾಡಲು ಅವಕಾಶ ಇಲ್ಲ. ಒತ್ತಡದ ಮೂಲಕ ಆಸ್ತಿಗೆ ನೋಟಿಸ್ ಕೊಡಲಾಗುತ್ತಿದೆ. ವಕ್ಫ್ ಟ್ರಿಬ್ಯೂನಲ್ ನಲ್ಲಿ ಯಾರಿಗೂ ನ್ಯಾಯ ಸಿಗುವುದಿಲ್ಲ. ಕೇವಲ ಒಂದು ಧರ್ಮ ಓಲೈಕೆಗಾಗಿ ವಕ್ಫ್ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.
Black Pepper Side Effects: ಕರಿಮೆಣಸು ಅತಿಯಾಗಿ ಸೇವಿಸುವುದರಿಂದ ಆಗುವ ಸೈಡ್ ಎಫೆಕ್ಟ್ʼಗಳೇನು ಗೊತ್ತಾ..?
ವಕ್ಫ್ ವಿವಾದದಲ್ಲಿ ಜಮೀರ್ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಮನೆಗೆ ಕಳಿಸಬೇಕು. ಅಲ್ಲಿಯವರೆಗೆ ಹೋರಾಟ ನಡೆಯಲಿದೆ ಎಂದು ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದರು. ರಾಜರಾಜ ಚೋಳನ ದೇವಸ್ಥಾನ ವಕ್ಫ್ ಆಸ್ತಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಊರಿಗೆ ಊರೇ ವಕ್ಫ್ ಆಗಿದೆ. ಹೊಯ್ಸಳ, ಚಾಲುಕ್ಯರು ಕಟ್ಟಿದ ದೇವಸ್ಥಾನ ವಕ್ಫ್ ಆಗಿದೆ. ಈ ಹಿನ್ನೆಲೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಯಾಗಬೇಕು ಎಂದು ಹೇಳಿದರು.