ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ವಕ್ಫ್ ವಿರುದ್ಧ ನಡೆದ ತೀವ್ರ ಹೋರಾಟ ನಡೆಯಿತು. ಈ ವೇಳೆ ಮಾತನಾಡಿದ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ವೋಟ್ ಬ್ಯಾಂಕ್ ಸೆಳೆಯಲು ರೈತರ ಜಮೀನುಗಳಿಗೆ ವಕ್ಫ್ ಆಸ್ತಿ ಎಂದು ಸರ್ಕಾರ ಹೇಳುತ್ತಿದೆ. ಊರಿಗೆ ಊರೇ ವಕ್ಫ್ ಆಸ್ತಿ ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇಷ್ಟು ದಿನ ಲವ್ ಜೀಹಾದ ಕೇಳಿದ್ದೇವೆ, ಈಗ ಲ್ಯಾಂಡ್ ಜೀಹಾದ ವಾತಾವರಣ ನಿರ್ಮಾಣ ಆಗಿದೆ. ನಾನು ಸಹ ಮೂರು ಬಾರಿ ಶಾಸಕಿ, ಎರಡು ಬಾರಿ ಮಂತ್ರಿ ಆಗಿದ್ದೆ. ಸ್ವತಃ ವಕ್ಫ್ ಸಚಿವೆ ನನ್ನ ಆಸ್ತಿಗೆ ಇವತ್ತು ವಕ್ಫ್ ಆಸ್ತಿ ಎಂದು ನೋಟಿಸ್ ಬಂದಿದೆ. ನಾಲ್ಕು ತಲೆಮಾರುಗಳಿಂದ ಅಲ್ಲೆ ಉಳುಮೆ ಮಾಡಿಕೊಂಡು ಬಂದಿದ್ದೇನೆ. ನಮ್ಮ ಪರಿಸ್ಥಿತಿಯೇ ಹೀಗೆ ಆಗಿದೆ, ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದರು. ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ 5 ತಂಡ ರಚನೆ ಮಾಡಿ ಅಧ್ಯಯನ ಹೋರಾಟ ನಡೆಯಲಿದ್ದು, ಡಿಸೆಂಬರ್ ಮೊದಲ ವಾರ ಪ್ರತಿ ಜಿಲ್ಲೆಗೆ ಭೇಟಿ ನೀಡ್ತೇವೆ. ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಹೋರಾಟ ಮಾಡ್ತೇವೆ ಎಂದರು.
R Ashok: ಸಿದ್ದರಾಮಯ್ಯ ಬಂದ ಬಳಿಕ ಮುಸ್ಲಿಮರಿಗೆ ಎರಡು ಕೊಂಬು ಬಂದಿದೆ: ಆರ್ ಅಶೋಕ್