ಛತ್ತೀಸ್ ಗಢ: ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದು, 10 ನಕ್ಸಲರನ್ನು ಎನ್ ಕೌಂಟರ್ ಮಾಡಿದೆ. ಗುರುವಾರ ಬೆಳಗ್ಗೆ ಛತ್ತೀಸ್ ಗಡದ ಸುಕ್ಮಾ ಜಿಲ್ಲೆಯ ಭೇಜ್ಜಿ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದೆ ಎಂದು ವರದಿಯಾಗಿದೆ. ನಕ್ಸಲರು ಒಡಿಶಾ ಮೂಲಕ ಛತ್ತೀಸ್ಗಢ ಪ್ರವೇಶಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಗುಂಡಿನ ಚಕಮಕಿಯಲ್ಲಿ 10 ನಕ್ಸಲರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಾಕ್ಟರ್, ಇಂಜಿನಿಯರ್ ಓದಿದ್ರೂ ಮೌಢ್ಯ, ಕಂದಾಚಾರ ಬಿಡೋದಿಲ್ಲ : ಸಿಎಂ ಶಿಕ್ಷಣ ಪಾಠ
ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಮೂರು ಸ್ವಯಂಚಾಲಿತ ಬಂದೂಕುಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ತಿಂಗಳು ನಾರಾಯಣಪುರ-ದಂತೇವಾಡ ಗಡಿಯ ಅರಣ್ಯದಲ್ಲಿ 31 ನಕ್ಸಲರನ್ನು ಹೊಡೆದುರುಳಿಸಿದ್ದರು. ಈ ವೇಳೆಯೂ ಕೂಡ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.