ಹುಬ್ಬಳ್ಳಿ: ನಾಳೆ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಹೊರಬೀಳಲಿದೆ. ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ದೊಡ್ಡ ಅಂತರದಲ್ಲಿ ಗೆಲ್ತಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ದೊಡ್ಡ ಅಂತರದಿಂದ ಗೆಲ್ತಾರೆ ಅನ್ನೋ ವಿಶ್ವಾಸವಿದೆ ಎಂದರು. ಇದೊಂದು ಯೂಟರ್ನ್ ಸರ್ಕಾರ. ದಿಕ್ಕು ದೆಸೆಯಿಲ್ಲದೆ ನಿರ್ಣಯ ಮಾಡ್ತಾರೆ. ಸರ್ಕಾರಕ್ಕೆ ದಿಕ್ಕು ಇಲ್ಲ, ದೆಸೆ ಇಲ್ಲ. ಯಾವ ನಾಯಕತ್ವವೂ ಇಲ್ಲ ಎಂದು ಕಿಡಿ ಕಾರಿದರು.
ಸ್ಥಾನಮಾನಕ್ಕಾಗಿ ಹೋರಾಟವೆಂಬ ಸಚಿವ ಚಲುವರಾಯಸ್ವಾಮಿಗೆ ಸುಮಲತಾ ತಿರುಗೇಟು
ನೋಟಿಸ್ ಕೊಟ್ಟರು, ವಾಪಸ್ ಪಡೆದರು. ಸೈಟ್ ತಗೊಂಡರು ವಾಪಸ್ ಕೊಟ್ಟರು. ಹೀಗಾಗಿ, ಇದೊಂದು ಯೂಟರ್ನ್ ಸರ್ಕಾರ. ಇದೀಗ ಆಸ್ಪತ್ರೆ ಸೇವೆಗೆಳ ಹೆಚ್ಚಳ ಮಾಡುತ್ತಿದ್ದಾರೆ. ಸರ್ಕಾರದ ಬಳಿ ದುಡ್ಡಿಲ್ಲ, ಸರ್ಕಾರ ದಿವಾಳಿಯಾಗಿದೆ. ತೆರಿಗೆ ಹೊರೆ ಭ್ರಷ್ಟಾಚಾರದ ಹೊರೆ ಆಗಿದೆ. ನಾನು ಎಕ್ಸಿಟ್ ಪೋಲ್ ನಂಬಿ ಮಾತಾಡುತ್ತಿಲ್ಲ. ಮೂರು ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ. ಕಾಂಗ್ರೆಸ್ ನವರು ನಾಳೆವರೆಗೂ ಹಾಗೆ ಹೇಳುತ್ತಾರೆ. ಸರ್ಕಾರದ ವಿರುದ್ದ ಬಡವರು, ದಲಿತರು ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗಾಗಿ ನಾನು ಎಕ್ಸಿಟ್ ಪೋಲ್ ನಂಬಿ ಮಾತಾಡಲ್ಲ. ನಮಗೆ ಮೂರು ಕ್ಷೇತ್ರದಲ್ಲಿ ಗೆಲ್ತೀವಿ ಅನ್ನೋ ವಿಶ್ವಾಸ ಇದೆ..ಮಹಾರಾಷ್ಟ್ರ ಹಾಗೂ ಜಾರ್ಖಂಡ್ ನಲ್ಲಿ ನಾವೇ ಸರ್ಕಾರ ರಚನೆ ಮಾಡ್ತೀವಿ ಎಂದರು.