ಬೆಂಗಳೂರು: ಗೋವಿಂದಪುರ ಪೊಲೀಸರ ಕಾರ್ಯಾಚರಣೆ ನಡೆಸಿ ಒರಿಸ್ಸಾದಿಂದ ಬೆಂಗಳೂರಿಗೆ ಗಾಂಜಾ ಸಾಗಾಟ ಮಾಡ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳ ಮೂಲದ ಅಚ್ಚು, ಬೆಂಗಳೂರು ಮೂಲದ ಜಮೀರ್ ಹಾಗೂ ಆತನ ಪತ್ನಿ ರೇಷ್ಮಾ ಬಂಧಿತ ಆರೋಪಿಗಳಾಗಿದ್ದು, ಒರಿಸ್ಸಾ ಮತ್ತು ಆಂಧ್ರ ಭಾಗದಲ್ಲಿ ಕ್ವಿಂಟಾಲ್ ಗಟ್ಟಲೇ ಗಾಂಜಾ ಸಂಗ್ರಹ ಮಾಡಿ ಸಂಗ್ರಹಿಸಿದ್ದ ಗಾಂಜಾವನ್ನು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರು, ಕೇರಳದಲ್ಲಿ ಮಾರಲು ಯೋಜಿಸಿದ್ದರು. ಜಮೀರ್ ಮತ್ತು ರೇಷ್ಮಾ ದಂಪತಿ ಬೆಂಗಳೂರಿನಲ್ಲಿ ಮತ್ತು ಡ್ರಗ್ ಪೆಡ್ಲರ್ ಅಚ್ಚು ಕೇರಳದಲ್ಲಿ ಗಾಂಜಾ ಮಾರಲು ನಿರ್ಧರಿಸಿದ್ದನು..
ಯಾವದೇ ಕಾರಣಕ್ಕೂ ಈ ದಿನ ಉಗುರುಗಳನ್ನು ಕತ್ತರಿಸಲೇಬೇಡಿ! ಕಷ್ಟ. ಬಡತನ ಬೆಂಬಿಡದೆ ಕಾಡುತ್ತೆ
ಸಂಗ್ರಹಿಸಲಾಗಿದ್ದ ಗಾಂಜಾ ಅನ್ನು ಬೆಂಗಳೂರು ಮತ್ತು ಕೇರಳಕ್ಕೆ ಸಾಗಿಸಲು ಆರೋಪಿಗಳು ಸೆಲ್ಫ್ ಡ್ರೈವಿಂಗ್ ಕಾರು ಬಾಡಿಗೆ ಪಡೆದಿದ್ದರು. ಬಳಿಕ, ಬೆಡ್ಶೀಟ್ನಲ್ಲಿ ಗಾಂಜಾ ತುಂಬಿ, ಕಾರಿನಲ್ಲಿ ಬೆಂಗಳೂರಿಗೆ ತರುತ್ತಿದ್ದರು. ಗಾಂಜಾ ತರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ತಪಾಸಣೆ ನಡೆಸಿದಾಗ ಕಾರಿನಲ್ಲಿ 3 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದೆ. ಕೂಡಲೆ ಆರೋಪಿಗಳನ್ನು ವಶಕ್ಕೆ ಪಡೆದು, ಗಾಂಜಾ ಜಪ್ತಿ ಮಾಡಿದ್ದಾರೆ. ಸದ್ಯ, ಮೂವರು ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.