ವಿಜಯಪುರ: ಬಿಜೆಪಿಯಿಂದ ರಾಜ್ಯಾದ್ಯಂತ ವಕ್ಫ್ ವಿರುದ್ದ ಹೋರಾಟಕ್ಕೆ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟ ಮಾಡಲಿ. ಆದರೆ ಅವರ ಅಧಿಕಾರಾವಧಿಯಲ್ಲೂ ಆಗಿದೆಯಲ್ಲ, ಆಗೇಕೆ ಹೋರಾಟ ಮಾಡಲಿಲ್ಲ. ಅವರ ಅಧಿಕಾರಾವಧಿಯಲ್ಲೂ ನೋಟಿಸ್ ಕೊಟ್ಟಿದ್ದಾರೆ. ಅವರ ಕಾಲದಲ್ಲೂ ಗೆಜೆಟ್ ನೊಟಿಫಿಕೇಶನ್ ಇತ್ತು. ವಕ್ಫ್ ತಪ್ಪು ಮಾಡಿದ್ದರೆ ಅದನ್ನು ಸರಿ ಪಡಿಸಲು ನಾನು ಹೇಳಿರುವೆ, ಸಿಎಂ ಅವರು ಕೂಡಾ ಹೇಳಿದ್ದಾರೆ.ವಕ್ಫ್ ಆಸ್ತಿಯಲ್ಲಿ ಕೇವಲ ಹಿಂದುಗಳದ್ದು ಹೋಗಿಲ್ಲ, ಮುಸ್ಲಿಂರದ್ದು ಆಗಿದೆ. 2014 ರ ಪ್ರಣಾಳಿಕೆಯಲ್ಲಿ ಯಾಕೆ ಹಾಕಿದ್ದೀರಿ ಎಂದು ಪ್ರಶ್ನೆ ಮಾಡಿದರು.
ರಾಜಕೀಯ ಪರಿಸ್ಥಿತಿ ಬದಲು ಹೇಳಿಕೆ : ಗೃಹ ಸಚಿವ ಜಿ.ಪರಂಮೇಶ್ವರ್ ಸ್ಪಷ್ಟನೆ
ಶೋಭಾ ಕರಂದ್ಲಾಜೆ ಪಾರ್ಲಿಮೆಂಟ್ ನಲ್ಲಿ ಪ್ರಶ್ನೆ ಯಾಕೆ ಕೇಳಿದರು. ಇವರದ್ದು ರಾಜಕೀಯ ಪ್ರೇರಿತ. ಇಷ್ಟು ದಿನ ಕುಂಬಕರ್ಣ ನಿದ್ದೆ ಮಾಡಿದ್ದೀರಿ, ಇದು ರಾಜಕೀಯ ಪ್ರೇರಿತ. ಕೇಂದ್ರ ಸರ್ಕಾರ ನಿಮ್ಮದೇ ಇದೆ. ನೀವು ಮೊದಲು ವಕ್ಪ್ ಗೆ ಸಪೋರ್ಟ್ ಮಾಡಿದ್ದೀರಿ, ಇಲ್ಲಿ ಬಂದು ನಾಟಕ ಮಾಡುತ್ತಿದ್ದೀರಿ. ಕೆಲವರು ವಿಜಯೇಂದ್ರ ಅವರನ್ನು ತೆಗಿಬೇಕು ಅಂತಾರೆ. ಅವರವರ ರಾಜಕೀಯ ಗೊಂದಲದಿಂದ ಹೀಗೆ ಆಗಿದೆ ಎಂದು ಬಿಜೆಪಿಗೆ ಟಾಂಗ್ ನೀಡಿದರು. ಮೂರು ಉಪಚುನಾವಣೆ ಹಾಗೂ ಮಹಾರಾಷ್ಟ್ರ ಜಾರ್ಖಂಡ್ ನಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.