ನಾನು ಯಾವಾಗ ಬೇಕಾದರೂ ಬ್ಯಾಟಿಂಗ್ ಮಾಡಲು ಸಿದ್ಧ ಎಂದು ಟೀಂ ಇಂಡಿಯಾದಲ್ಲಿ ಮತ್ತೆ ಆಡುವ ಬಗ್ಗೆ ತಮ್ಮ ಇಂಗಿತವನ್ನು ಚೇತೇಶ್ವರ ಪೂಜಾರ ವ್ಯಕ್ತಪಡಿಸಿದ್ದಾರೆ. ಕಾಮೆಂಟರಿ ಬಾಕ್ಸ್ನಲ್ಲಿ ಕುಳಿತು ಮಾತನಾಡಿದ ಅವರು, ಆಸ್ಟ್ರೇಲಿಯಾ ಪ್ರವಾಸದಲ್ಲಿ ಚೇತೇಶ್ವರ ಪೂಜಾರಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಆಟಗಾರನಾಗಿ ಅಲ್ಲದಿದ್ದರೂ,
ವೀಕ್ಷಕ ವಿವರಣೆಗಾರನಾಗಿ ಈ ಟೆಸ್ಟ್ನ ಭಾಗವಾಗಿರುವ ಪೂಜಾರ, ಹಿಂದಿ ಭಾಷೆಯ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಭಾರತದ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟಾದ ಬಳಿಕ ಕಾಮೆಂಟರಿ ಬಾಕ್ಸ್ನಲ್ಲಿ ಕುಳಿತಿದ್ದ ಪೂಜಾರ, ತಾನು ಬ್ಯಾಟಿಂಗ್ ಮಾಡಲು ಸದಾ ಸಿದ್ಧ ಎಂದು ಹೇಳಿದ್ದಾರೆ.
ಯಾವದೇ ಕಾರಣಕ್ಕೂ ಈ ದಿನ ಉಗುರುಗಳನ್ನು ಕತ್ತರಿಸಲೇಬೇಡಿ! ಕಷ್ಟ. ಬಡತನ ಬೆಂಬಿಡದೆ ಕಾಡುತ್ತೆ
ಇನ್ನು ಯಶಸ್ವಿ ಜೈಸ್ವಾಲ್ ವಿಕೆಟ್ ಪತನದ ವಿಶ್ಲೇಷಣೆ ಮಾಡಿದ ಪೂಜಾರ, ಯಶಸ್ವಿ ಸ್ವಲ್ಪ ಅವಸರ ಮಾಡಿದರು. ಯಶಸ್ವಿ ಡ್ರೈವ್ ಶಾಟ್ ಅನ್ನು ಚೆನ್ನಾಗಿ ಆಡುತ್ತಾರೆ. ಆದರೆ ಪಿಚ್ನಲ್ಲಿ ಬೌನ್ಸ್ ಇದ್ದ ಕಾರಣ, ಆ ಶಾಟ್ ಆಡಲು ಅವರು ಸ್ವಲ್ಪ ಕಾಯಬೇಕಿತ್ತು ಎಂದರು.