ಕಾರವಾರ: ಉತ್ತರ ಕನ್ನಡದಲ್ಲಿ ಮಂಗನಬಾವು ಕಾಯಿಲೆ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಂಡಿದ್ದು, ಇಂದಿರಾ ಗಾಂದಿ ವಸತಿ ಶಾಲೆಗೆ ಮೂರು ದಿನಗಳ ಕಾಲ ರಜೆ ನೀಡಲಾಗಿದೆ. ಕಾರವಾರದ ಇಂದಿರಾಗಾಂದಿ ವಸತಿ ಶಾಲೆಯಲ್ಲಿ ಸೋಂಕಿತರ ಸಂಖ್ಯೆ125ಕ್ಕೆ ಏರಿಕೆ ಕಂಡು ಬಂದಿದೆ. ಬೃಂದಾವನ ವಸತಿ ಬಡಾವಣೆಯ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಸತಿ ಶಾಲೆಯಲ್ಲಿ 6 ರಿಂದ 10 ನೇ ತರಗತಿ ಓದುತ್ತಿರುವ 210 ವಿದ್ಯಾರ್ಥಿಗಳಿದ್ದಾರೆ.
ಮುಡಾ ಹಗರಣ : ಕಡತ ನಾಪತ್ತೆ ಮಾಡಿದವರ ವಿರುದ್ಧ ಕಾನೂನು ಕ್ರಮವಾಗಲಿ – ದೂರುದಾರ ಸ್ನೇಹಮಯಿ ಕೃಷ್ಣ
ಕಳೆದ ನವೆಂಬರ್ 16ರಂದು ಮೊದಲ ಬಾರಿಗೆ ಮಂಗನ ಬಾವು ಸೋಕು ಕಾಣಿಸಿಕೊಂಡಿತ್ತು. ಮೊದಲಿಗೆ ಐದು ವಿದ್ಯಾರ್ಥಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಅದಾದ ಮೂರನೇ ದಿನದಲ್ಲಿ ಸೋಂಕಿತರ ಸಂಖ್ಯೆ 50ಕ್ಕೇ ಏರಿತ್ತು. ಆದರೆ, ಇದೀಗ 125ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಡಗೋಡು ವಸತಿ ನಿಲಯಕ್ಕೆ ವೈದ್ಯರ ತಂಡ ನಿಯೋಜಿಸಲಾಗಿದ್ದು, ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.