ಬೆಳಗಾವಿ: ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ಬೆಳಗಾವಿ ಮಂಡಳಿಯು ಮಾರುತಿ ನಿಂಗಪ್ಪ ಲಮಾಣಿ ಅವರು ತಮ್ಮನ್ನು ಸಾಹಿತ್ಯ, ಭಾಷೆ ನೆಲ, ಜಲ ಸಂಸ್ಕೃತಿ, ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಸಾಧನೆಗೈದದ್ದಕ್ಕೆ, ಮಂಡಳಿಯು ಅವರನ್ನು ಗುರುತಿಸಿ ಸುವರ್ಣಮಹೋತ್ಸವ ಪುರಸ್ಕಾರ ಕ್ಕೆ ಆಯ್ಕೆ ಮಾಡಿದ್ದು,
ಇದೇ ನವೆಂಬರ್ 17. 2024 ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿ 50 ವರ್ಷಗಳು ಸಂಪನ್ನಗೊಂಡ ಸುವರ್ಣವರ್ಷಾಚರಣೆಯ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಿ ಗೌರವಿಸಲು ಮಂಡಳಿ ನಿರ್ಧರಿಸಿದೆ ಎಂದು ವೇದಿಕೆಯ ಅಧ್ಯಕ್ಷರಾದ ಶ್ರೀ ಪ್ರೊ.ಎಲ್ಎಚ್ ಪೆಂಡಾರಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ವೇದಿಕೆಯ ಉಪಾಧ್ಯಕ್ಷ ಪ್ರೊ.ಚಂದ್ರ ಶೇಖರ ಹಿರೇಮಠ, ಗೌರವ ಮಾರ್ಗ ದರ್ಶಕರು ಡಾ. ರಾಧಾ ಕುಲಕರ್ಣಿ ಮತ್ತು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಜಮಖಂಡಿಯ ಅಧ್ಯಕ್ಷರಾದ ಶ್ರೀ ಜಯವಂತ ಕಾಳೆ, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿ, ಮತ್ತು ಪ್ರಾಂಶುಪಾಲರು, ಪ್ರಾಧ್ಯಾಪಕ ವರ್ಗ, ಇತರೆ ಸಿಬ್ಬಂದಿ ವರ್ಗದವರು ಸೇರಿ ಮಾರುತಿ ಲಮಾಣಿ ಅವರಿಗೆ ಪುರಸ್ಕಾರ ದೊರೆತಿದ್ದಕ್ಕೆ ಅಭಿನಂದನೆಗಳನ್ನು ಕೋರಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.