ಕಾರವಾರ:- ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕರ್ನಾಟಕದಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಇದು ಪೊಲೀಸ್ ಇಲಾಖೆಯೇ ತಲೆ ತಗ್ಗಿಸೋ ಸುದ್ದಿ! ಸಮವಸ್ತ್ರದಲ್ಲೇ ಈ ರೀತಿ ಸರಿನಾ!?
ಅಷ್ಟೇ ಕಾರವಾರದ ಶಾಲೆಯೊಂದರಲ್ಲಿ ಒಂದೇ ದಿನ ಬರೋಬ್ಬರಿ 50 ಕ್ಕೂ ಹೆಚ್ಚು ಸ್ಟೂಡೆಂಟ್ಸ್ ಗೆ ಕಾಯಿಲೆ ಪತ್ತೆ ಆಗಿದ್ದು, ಚಿಕಿತ್ಸೆಗೆ ದಾಖಲಾಗಿದ್ದಾರೆ. ಘಟನೆಯಿಂದ ಪೋಷಕರು ಆತಂಕಗೊಂಡಿದ್ದಾರೆ.
ಹೌದು, ಒಂದೇ ದಿನದಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಗನಬಾವು ಕಾಯಿಲೆ ಕಾಣಿಸಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ವಸತಿ ಶಾಲೆಯಲ್ಲಿ ಜರುಗಿದೆ.
ಇನ್ನೂ ಮಕ್ಕಳನ್ನು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿನ ಬೃಂದಾವನ ವಸತಿ ಬಡಾವಣೆಯ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಸತಿ ಶಾಲೆಯಲ್ಲಿ 6 ರಿಂದ 10 ನೇ ತರಗತಿ ಓದುತ್ತಿರುವ 205 ವಿದ್ಯಾರ್ಥಿಗಳಿದ್ದಾರೆ.
ಇವರ ಪೈಕಿ ಬುಧವಾರ 25 ಜನರಲ್ಲಿ ಕಾಣಿಸಿಕೊಂಡಿತ್ತು. ಆದರೆ, ಇದೀಗ ಮಂಗನಬಾವು ಕಾಯಿಲೆ ಇತರೆ ವಿದ್ಯಾರ್ಥಿಗಳಿಗೂ ಹಬ್ಬಿದ್ದು, 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸೋಂಕಿಗೆ ಒಳಗಾಗಿದ್ದಾರೆ.
ಒಟ್ಟು 75 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಈ ಮಂಗನಬಾವು ಕಾಣಿಸಿಕೊಂಡಿದ್ದು, ಸದ್ಯ ಕೆಲವು ಮಕ್ಕಳಿಗೆ ಮುಂಡಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.