ಬೆಂಗಳೂರು:- ಇದು ಪೊಲೀಸ್ ಇಲಾಖೆಯೇ ತಲೆ ತಗ್ಗಿಸೋ ಸುದ್ದಿ! ಜನರಿಗೆ ಬುದ್ದಿ ಹೇಳುವವರೇ ತಪ್ಪು ಮಾಡಿದ್ರೆ ಯಾರಿಗೆ ಕೇಳೋದು ಸ್ವಾಮಿ, ಯಾರನ್ನ ಬಿಡೋದು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಬಂಧನ ವಾರೆಂಟ್ ಜಾರಿ
ಎಸ್, ಪೋಲೀಸ್ರು ಅಂದ್ರೆ ಶಿಸ್ತಿನ ಸಿಪಾಯಿಗಳು ಅಂತಾರೆ. ಆದ್ರೆ ಈ ಪೊಲೀಸ್ರನ್ನ ನೋಡಿದ್ರೆ ಇವ್ರೇನೂ ಪೊಲೀಸ್ರ ಇಲ್ಲ ಪುಂಡರ ಅನ್ನೋ ಅನುಮಾನ ಮೂಡುತ್ತೆ. ಪೊಲೀಸ್ ಠಾಣೆಯಲ್ಲೆ ಅದು ಸಮವಸ್ತ್ರದಲ್ಲೆ ಪೊಲೀಸರು ಗಲಾಟೆ ಮಾಡಿಕೊಂಡಿದ್ದಾರೆ.
ಪೊಲೀಸ್ ಇಲಾಖೆ ತಲೆತಗ್ಗಿಸುವಂತ ಘಟನೆ ಇದಾಗಿದ್ದು ಈ ಗಲಾಟೆಯಲ್ಲಿ ಇನ್ಸ್ಪೆಕ್ಟರ್, ಎ ಎಸ್ ಐ ಹಾಗೂ ಸಿಬ್ಬಂದಿ ಗಲಾಟೆ ಮಾಡಿಕೊಂಡಿದ್ದಾರೆ. ಅದ್ರಲ್ಲೂ ಹೆಡ್ ಕಾನ್ಸ್ಟೇಬಲ್ ಕದಂಬ ಅನ್ನೋ ಸಿಬ್ಬಂದಿ ಮತ್ತೊಬ್ಬ ಸಿಬ್ಬಂದಿಗೆ ಬಾಯಿಗೆ ಬಂದಂತೆ
ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಇದೇ ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಒಂದಷ್ಟು ಆರೋಪ ಕಮಿಷನರ್ ಗೆ ಕೆಲ ಸಿಬ್ಬಂದಿ ಪತ್ರ ಬರೆದಿದ್ರು. ಸದ್ಯ ಗಲಾಟೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದಾಶಿವನಗರ ಫೊಲೀಸ್ ಠಾಣೆಯಲ್ಲಿ ಪೊಲೀಸರ ಗಲಾಟೆ ವಿಡಿಯೋ ವೈರಲ್ ಆಗ್ತಿದೆ.
ಇನ್ಸ್ಪೆಕ್ಟರ್ ಗಿರೀಶ್ ,ಹೆಡ್ ಕಾನ್ ಸ್ಟೇಬಲ್ ಕದಂಬ,ASI ರಂಗಸ್ವಾಮಿ, HC ವಸಂತ ನಡುವೆ ಗಲಾಟೆ ಆಗಿದ್ದು, ಬಾಯಿಗೆ ಬಂದಂತೆ ಬೈದಾಡಿಕೊಂಡಿರೋ ಪೊಲೀಸ್ ಸಿಬ್ಬಂದಿ ನಡೆ ಸಾರ್ವಜನಿಕರ ವಲಯದಲ್ಲಿ ನಗೆಪಾಟಲಿಗೀಡಾಗಿದೆ.
ಇನ್ನೂ ಪೊಲೀಸರ ಗಲಾಟೆ ನೋಡಿ ದೂರು ಕೊಡಲು ಬಂದವರೆ ಕಂಗಾಲಾಗಿದ್ದಾರೆ. ಮಹಿಳಾ ಸಿಬ್ಬಂದಿ ಮುಂದೆಯೇ ಅವಾಚ್ಯ ಶಬ್ದ ಬಳಸಿ ಗಲಾಟೆ ಮಾಡಿಕೊಂಡಿರೋ ಪೊಲೀಸ್ರ ಈ ನಡೆ ಎಷ್ಟು ಸರಿ ಅನ್ನೋದು ಅವರೇ ಹೇಳಬೇಕು.