ಬೆಂಗಳೂರು:- ಸಿಲಿಕಾನ್ ಸಿಟಿ ಮಂದಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರಿನಂತಹ ದೊಡ್ಡ ಮಹಾನಗರದಲ್ಲಿ ಮನೆ ಖರೀದಿ ಮಾಡಬೇಕು, ಆಸ್ತಿ ಮಾಡಬೇಕು ಅಂತ ಯಾರಿಗ್ ತಾನೇ ಅನ್ನಿಸಲ್ಲ ಹೇಳಿ. ಅಂತವರಿಗೆ ಇದೀಗ ಒಂದು ಸುವರ್ಣಾವಕಾಶ ಸಿಕ್ಕಿದ್ದು, ಈ ಸುದ್ದಿ ಕೊನೆಯವರೆಗೂ ಮಿಸ್ ಮಾಡ್ದೆ ನೋಡಿ.
ಬೆಂಗಳೂರು ಹೊರವಲಯದಲ್ಲಿರುವ ತುಮಕೂರು ರಸ್ತೆಯ ಹುಣ್ಣಿಗೆರೆಯಲ್ಲಿ BDA ಸುಮಾರು 25 ವಿಲ್ಲಾಗಳನ್ನು ಹರಾಜು ಹಾಕುತ್ತಿದೆ. ಡಾ.ಪುನೀತ್ ರಾಜ್ಕುಮಾರ್ ಹೆಸರಿನ ಈ ವಿಲ್ಲಾಗಳು ಡಿಸೆಂಬರ್ನಲ್ಲಿ 16ರಂದು ನಡೆಯಲಿರುವ E-ಹರಾಜಿನ ಮೂಲಕ ಹಂಚಿಕೆ ಆಗಲಿದೆ.
1,269 ಚದರ ಮೀಟರ್ನಿಂದ 1,804 ಚದರ ಮೀಟರ್ನಲ್ಲಿ ನಿರ್ಮಾಣವಾಗಿರುವ ಈ ವಿಲ್ಲಾಗಳ ಪ್ರಾಥಮಿಕ ಬೆಲೆ ₹76.50 ಲಕ್ಷದಿಂದ ₹1.11 ಕೋಟಿ ರೂ. ವರೆಗೆ ನಿಗಧಿ ಮಾಡಲಾಗಿದೆ. ಹಾಗಾದ್ರೆ ಈ ವಿಲ್ಲಾ ಖರೀದಿಗೆ ನೋದಂಣಿ ಮಾಡಿಕೊಳ್ಳೋದು ಹೇಗೆ? ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಇದೇ ನವೆಂಬರ್ 29ರಿಂದ ಡಿಸೆಂಬರ್ 13ರ ತನಕ BDA ಅಫಿಶೀಯಲ್ ವೆಬ್ಸೈಟ್ನಲ್ಲಿ ಇ-ಹರಾಜಿನಲ್ಲಿ ಪಾಲ್ಗೊಂಡು ನೋಂದಣಿ ಮಾಡಲು ಅವಕಾಶವಿದೆ. ಇನ್ನೂ 4 ಲಕ್ಷ ರೂಪಾಯಿ ಶುಲ್ಕವನ್ನು ಪಾವತಿ ಮಾಡಿ ನೋಂದಣಿ ಮಾಡಿಕೊಳ್ಳಬೇಕಿದೆ.
31 ಎಕರೆ ಪ್ರದೇಶದಲ್ಲಿ 271.46 ಕೋಟಿ ರೂ.ಗಳ ವೆಚ್ಚದಲ್ಲಿ 243 ವಿಲ್ಲಾಗಳನ್ನು ನಿರ್ಮಾಣ ಮಾಡಿರುವ ಬಿಡಿಎ ಡಿಸೆಂಬರ್ 16ರಂದು ಬೆಳಗ್ಗೆ 11 ಗಂಟೆಗೆ ವಿಲ್ಲಾಗಳ ಇ-ಹರಾಜು ಪ್ರಕ್ರಿಯೆ ನಡೆಸಲಿದೆ. ಡಿಸೆಂಬರ್ 16 ರಂದು ಆರಂಭವಾಗುವ ಹರಾಜು ಪ್ರಕ್ರಿಯೆ ಡಿಸೆಂಬರ್ 17ರ ಸಂಜೆ 5 ಗಂಟೆಯ ತನಕ ನಡೆಯಲಿದೆ.