ಬೆಂಗಳೂರು:- ಬೆಂಗಳೂರಿನಲ್ಲಿ ಗುಂಡಿ ರಸ್ತೆ ಗುಂಡಿ ಮುಚ್ಚಲು BBMP ಮಾಸ್ಟರ್ ಪ್ಲ್ಯಾನ್ ಮಾಡಿದ್ದು, IISC ತಜ್ಞರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿದೆ.
ಅಯ್ಯಪ್ಪಸ್ವಾಮಿಗೆ ಇರುಮುಡಿ ಹೋರೋದು ಯಾಕೆ!? ಶಬರಿಮಲೆ ಭಕ್ತರು ತಿಳಿಯಲೇಬೇಕಾದ ವಿಚಾರ!
ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ನಿರ್ಮಾಣ, ಮೇಲ್ದರ್ಜೆಗೆ ಮತ್ತು ನಿರ್ವಹಣೆಯ SOP ಮತ್ತು ಕೈಪಿಡಿಯ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ನಿರ್ಮಾಣ, ಮೇಲ್ದರ್ಜೆಗೇರಿಸುವುದು, ಅಭಿವೃದ್ಧಿ ಪಡಿಸುವುದು, ನಿರ್ವಹಣೆ ಕೈಗೊಳ್ಳಲು ಒಂದು ಸಮಗ್ರ ನಿರ್ಧಾರಿತ ಕಾರ್ಯಾಚರಣೆ ವಿಧಾನ(SOP) ಮತ್ತು ಕೈಪಿಡಿಯ ಸಲುವಾಗಿ ಪ್ರಧಾನ ಅಭಿಯಂತರರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಹೈಡೆನ್ಸಿಟಿ ಕಾರಿಡಾರ್, ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳು ಮತ್ತು ವಲಯ ಮಟ್ಟದ ರಸ್ತೆಗಳು ಸೇರಿದಂತೆ ಸುಮಾರು 12878.78 ಕಿ.ಮೀ ಉದ್ದ ರಸ್ತೆ ಜಾಲವಿದ್ದು, ಪ್ರತಿ ರಸ್ತೆಯನ್ನು ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಸದೃಡ ಮತ್ತು ಧೀರ್ಘ ಬಾಳಿಕೆ ಬರುವಂತೆ ವಿನ್ಯಾಸಗೊಳಿಸುವುದು, ನಿರ್ಮಾಣ ಮಾಡುವುದು ಮತ್ತು ನಿರ್ವಹಣೆ ಮಾಡುವುದು ಪ್ರಸ್ತುತ ಅತ್ಯಗತ್ಯವಾಗಿರುತ್ತದೆ.
ಮಾನ್ಯ ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರ ನೇತೃತದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಂಗಳೂರು ನಗರದ ರಸ್ತೆಗಳನ್ನು ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ವಾಹನಗಳ ಸಾಂದ್ರತೆಯ ಅನುಗುಣವಾಗಿ ಪ್ರತಿ ವಿವಿಧ ರಸ್ತೆಗಳನ್ನು ಒಂದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂದು ಸೂಚನೆ ನೀಡಿದ್ದು, ಸದರಿ ಸೂಚನೆಯ ಅನುಗುಣವಾಗಿ ಬೆಂಗಳೂರು ನಗರದ ರಸ್ತೆಗಳ ನಿರ್ಮಾಣ, ಮೇಲೇರ್ಜಗೆ ಏರಿಸುವುದು, ಅಭಿವೃದ್ಧಿ ಪಡಿಸುವುದು ನಿರ್ವಹಣೆ ಕೈಗೊಳ್ಳಲು ಒಂದು ಸಮಗ್ರ ನಿರ್ಧಾರಿತ ಕಾರ್ಯಚಾರಣೆ ವಿಧಾನ(SOP)ಅನ್ನು ಮತ್ತು ರಸ್ತೆ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಯ ಕೈಪಿಡಿಯನ್ನು ಪ್ರಧಾನ ಅಭಿಯಂತರರು ನೇತೃತ್ವದಲ್ಲಿ “ಪಾಲಿಕೆಯ ಮುಖ್ಯ ಅಭಿಯಂತರರುಗಳು ಒಳಗೊಂಡಂತೆ ಐ.ಐ.ಎಸ್.ಸಿ ಸಂಸ್ಥೆಯ ಪ್ರಾಚಾರ್ಯರು, ಬಿಬಿಎಂಪಿ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಬ್ಲ್ಯೂ.ಆರ್.ಐ(ಇಂಡಿಯಾ) ನುರಿತ ತಜ್ಞರ ಸಮಿತಿ”ಯನ್ನು ಸೃಜಿಸುವುದು ಸೂಕ್ತವೆಂದು ಅಭಿಪ್ರಾಯಿಸಲಾಗಿರುತ್ತದೆ.
ಸದರಿ ಸಮಿತಿಯ ಮುಖ್ಯ ಉದ್ದೇಶ ಹಾಗೂ ಕಾರ್ಯವ್ಯಾಪ್ತಿಯು ರಸ್ತೆಯ ವಿನ್ಯಾಸ, ರಸ್ತೆಗೆ ತಗಲಬಹುದಾದ ನಿರ್ಮಾಣ/ನಿರ್ವಹಣಾ ವೆಚ್ಚ, ವಾಹನ ಸಾಂದ್ರತೆಯ ಅನುಗುಣವಾಗಿ ಮರುಡಾಂಬರೀಕರಣ ಪುನರಾವರ್ತನ ಅವಧಿ, ರಸ್ತೆ ಚರಂಡಿ ವ್ಯವಸ್ಥೆ ಮತ್ತು ವಿನ್ಯಾಸ, ರಸ್ತೆ ಉಬ್ಬರ ನಿರ್ಮಾಣ ಮತ್ತು ಥರ್ಮೋಪ್ಲಾಸ್ಟಿಕ್ ಬಣ್ಣ ಬಳೆಯುವಿಕೆ ಮತ್ತು ಪುನರಾವರ್ತನ ಅವಧಿ ಇತ್ಯಾದಿ ಕಾರ್ಯಗಳಾಗಿರುತ್ತದೆ.
ಸಮಿತಿಯಲ್ಲಿರುವವರ ವಿವರ:
* ಸಮಿತಿಯ ಅಧ್ಯಕ್ಷರು: ಪ್ರಧಾನ ಅಭಿಯಂತರರು, ಬಿಬಿಎಂಪಿ.
* ಸದಸ್ಯರು:
(1) ಮುಖ್ಯ ಅಭಿಯಂತರರು(ಯೋಜನೆ-ಕೇಂದ್ರ),
(2) ಮುಖ್ಯ ಪ್ರಧಾನ ನಿರ್ವಹಾಕರು(ಬಿ.ಎಸ್.ಡಬ್ಲ್ಯೂ.ಎಂ.ಎಲ್)
(3) ಅಧೀಕ್ಷಕ ಅಭಿಯಂತರರು (ವಿದ್ಯುತ್)
(4) ಪ್ರೋ. ಆಶಿಷ್ ವರ್ಮ, ಪ್ರಚಾರ್ಯರು, ಐ.ಐ.ಎಸ್.ಸಿ.
(5) ಪ್ರೋ. ವಿ.ಶ್ರೀನಿವಾಸ್, ಪ್ರಚಾರ್ಯರು, ಐ.ಐ.ಎಸ್.ಸಿ.
(6) ಪ್ರೋ. ಅಂಜ್ಗನ್, ಪ್ರಾಚಾರ್ಯರು, ಐ.ಐ.ಎಸ್.ಸಿ
(7) ಡಾ॥ ಸತ್ಯವತಿ, ಐ.ಐ.ಎಸ್.ಸಿ.
(8) ಶ್ರೀನಿವಾಸ್ ಅರವಳ್ಳಿ, ಮೆ|| ಡಬ್ಲ್ಯೂ.ಆರ್.ಐ(ಇಂಡಿಯಾ).
(9) ಚೇತನ್, ಮೆ|| ಡಬ್ಲ್ಯೂ.ಆರ್.ಐ(ಇಂಡಿಯಾ).
* ಸದಸ್ಯ ಕಾರ್ಯದರ್ಶಿ: ಉಪ ಮುಖ್ಯ ಅಭಿಯಂತರರು(ರ.ಮೂ.ಸೌ).
ಸದರಿ ಸಮಿತಿಯು 1ನೇ ಹಾಗೂ 3ನೇ ಬುಧವಾರ ಸಭೆಯನ್ನು ಸೇರಿ ಬಿಬಿಎಂಪಿ ವ್ಯಾಪ್ತಿಯ ವಿವಿಧ ವರ್ಗದ ರಸ್ತೆಗಳ ನಿರ್ಮಾಣ, ಮೇಲೇರ್ಜಗೆ ಏರಿಸುವುದು, ಅಭಿವೃದ್ಧಿ ಪಡಿಸುವುದು ನಿರ್ವಹಣೆ ಕೈಗೊಳ್ಳಲು ಒಂದು ಸಮಗ್ರ ನಿರ್ಧಾರಿತ ಕಾರ್ಯಚಾರಣೆ ವಿಧಾನ(SOP) ಅನ್ನು ಮತ್ತು ರಸ್ತೆ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಯ ಕೈಪಿಡಿಯನ್ನು ತಯಾರಿಸಲು ಕ್ರಮವಹಿಸುವುದು.
ದಿನಾಂಕ: 15.12.2024ರೊಳಗಾಗಿ ಕೈಪಿಡಿಯನ್ನು ಮೇಲ್ಕಂಡ ಉಲ್ಲೇಖಿತ ಕಾರ್ಯವ್ಯಾಪ್ತಿಯಂತೆ ತಯಾರಿಸಿ ಪ್ರಕಟಿಸಲು ಕ್ರಮವಹಿಸುವುದು ಹಾಗೂ ಸದರಿ ಕೈಪಿಡಿಯಂತೆ ಕಾಮಗಾರಿಯ ನಿರ್ವಹಣೆಯ ಬಗ್ಗೆ ಮೇಲ್ವಿಚರಣೆ ನಡೆಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಆದೇಶ ಹೊರಡಿಸುರುತ್ತಾರೆ.