ನೆಲಮಂಗಲ:- ಚೆಕ್ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ರಂಗಧಾಮಯ್ಯ ರನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗದೆ ರಂಗಧಾಮಯ್ಯ ತಲೆಮರೆಸಿಕೊಂಡಿದ್ದರು. ಬೆಂಗಳೂರಿನ ಎಸಿಜೆಎಂ ನ್ಯಾಯಾಲಯದಿಂದ ವಾರಂಟ್ ಜಾರಿ ಆಗಿತ್ತು.
ಬಂಧಿತರು, ಅಸೆಡ್ಜ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ ಭೂಮಿ ನೀಡುವುದಾಗಿ ಹಣ ಪಡೆದಿದ್ದು, ಬಳಿಕ ಹಣ ವಾಪಸ್ ನೀಡದೆ ಚೆಕ್ ವಿತರಣೆ ಮಾಡಿ ವಂಚನೆ ಮಾಡಿದ್ದರು ಎಂದು ತಿಳಿದು ಬಂದಿದೆ.
ಹೀಗಾಗಿ ನೆಲಮಂಗಲದ ಮನೆಯಲ್ಲಿ ಮಲ್ಲರಬಾಣವಾಡಿ ರಂಗಧಾಮಯ್ಯ ರನ್ನು ಅರೆಸ್ಟ್ ಮಾಡಲಾಗಿದೆ