ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ದೀಮಂತ ಪ್ರಶಸ್ತಿ ಸ್ವೀಕರಿಸಿದ ಸಮಗಾರ ಸಮಾಜದ ಹಾಗೂ ಕನ್ನಡಪರ ಸಂಘಟನೆಯ ಕನ್ನಡ ಕ್ರಾಂತಿದೀಪದ ರಾಜ್ಯಾಧ್ಯಕ್ಷರಾದ ರವಿ ಕದಂ ಅವರಿಗೆ ಇಂದು ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.
ಮಕ್ಕಳು ಮಾಡ್ಕೊಳ್ಳಿ ಲಕ್ಷ ಬಹುಮಾನ ಗೆಲ್ಲಿ! ಇದು ಕೊಡವ ಸಮಾಜದಿಂದ ಬಂಪರ್ ಆಫರ್!
ಈ ಸಂದರ್ಭದಲ್ಲಿ ನಮ್ಮ ಸಮಾಜದ ರಾಜ್ಯ ಉಪಾಧ್ಯಕ್ಷರು ಪರಶುರಾಮ ಅರಕೇರಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಮಾಜಿ ಮಹಾಪೌರರಾದ ವೆಂಕಟೇಶ್ ಮೇಸ್ತ್ರಿ ಹಾಗೂ ಮಹಾಮಂಡಲದ ಉಪಾಧ್ಯಕ್ಷರಾದ ಬಸವರಾಜ ಕಲಾದಗಿ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ಹೊಸಮನಿ, ಧ್ರುವ ಗಾಮನಗಟ್ಟಿ, ಮಂಜುನಾಥ್ ಸಣ್ಣಕ್ಕಿ, ನಾಸಿರ್ ಮನಿಕ್, ಮಮ್ಮದ್ ಗೌಸ್ ಕರೋಲಿ, ಧನ್ಯ ಕುಮಾರ್, ಕೊಟ್ಟಿ ಲೋಹಿತ್ ಗಾಮನಗಟ್ಟಿ ಮುಂತಾದವರು ಉಪಸ್ಥಿತರಿದ್ದರು.