ಭಾರತೀಯರು ತಮ್ಮ ಆಹಾರದಲ್ಲಿ ತರಕಾರಿಯನ್ನು ಬಳಸುವಾಗ ಅದರ ಪ್ರತಿಯೊಂದು ಭಾಗವನ್ನು ಬಳಸುತ್ತಾರೆ. ಯಾವುದೇ ಭಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ತಿರುಳು, ಚರ್ಮದವರೆಗೆ, ಸಸ್ಯಗಳ ಬೇರು, ಕಾಂಡ ಮತ್ತು ಎಲೆಗಳನ್ನು ಸಹ ಭಾರತೀಯ ಅಡುಗೆಯಲ್ಲಿ ಬಳಸಲಾಗುತ್ತದೆ.
ಜನರಿಗೆ ಹೊರೆಯಾಗದಂತೆ ಸೇವಾ ಶುಲ್ಕ ಪರಿಷ್ಕರಣೆ ಮಾಡುವ ಬಗ್ಗೆ ಚಿಂತನೆ: ದಿನೇಶ್ ಗುಂಡೂರಾವ್
ಸಾಮಾನ್ಯವಾಗಿ ಹೆಚ್ಚಿನವರು ಈರುಳ್ಳಿಯನ್ನು ಕತ್ತರಿಸಿದ ನಂತರ ಅದರ ಸಿಪ್ಪೆಯನ್ನು ಬಿಸಾಡುತ್ತಾರೆ. ಇಲ್ಲವಾದರೆ ಗಿಡಗಳಿಗೆ ಗೊಬ್ಬರಕ್ಕೆ ಬಳಸುತ್ತಾರೆ. ಆದರೆ ಈ ಈರುಳ್ಳಿ ಸಿಪ್ಪೆಯಲ್ಲಿ ಎಷ್ಟೆಲ್ಲಾ ಆರೋಗ್ಯಕರ ಗುಣಗಳಿವೆ ಅನ್ನೋದು ನಿಮಗೆ ಗೊತ್ತಾ?
ಈರುಳ್ಳಿ ಸಿಪ್ಪೆಯಲ್ಲಿ ಉತ್ತಮ ಪೋಷಕಾಂಶಗಳಿದ್ದು, ಇವು ವಿವಿಧ ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಹಾಗಾದ್ರೆ ಈರುಳ್ಳಿ ತ್ವಚೆ ಹಾಗೂ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂಬುವುದರ ಬಗ್ಗೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ.
ಈರುಳ್ಳಿ ಸಿಪ್ಪೆ ಏಕೆ ಮುಖ್ಯ?: ಈರುಳ್ಳಿ ಸಿಪ್ಪೆಯು ಫೈಬರ್ನಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಈರುಳ್ಳಿಯ ಸಿಪ್ಪೆಯು ಉತ್ತಮ ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಜೊತೆಗೆ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಈರುಳ್ಳಿ ಸಿಪ್ಪೆಯು ಫ್ಲೇವನಾಯ್ಡ್ಗಳನ್ನು ಹೊಂದಿದ್ದು, ವಿಶೇಷವಾಗಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಫ್ಲೇವನಾಯ್ಡ್ ಕ್ವೆರ್ಸೆಟಿನ್ ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡುವಲ್ಲಿ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಯೋಜನಕಾರಿ ಆಗಿದೆ.
ಈರುಳ್ಳಿ ಸಿಪ್ಪೆಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜೊತೆಗೆ, ಕಣ್ಣಿನ ಆರೋಗ್ಯ, ಬಲವಾದ ಮೂಳೆಗಳು ಮತ್ತು ಎಲೆಕ್ಟ್ರೋಲೈಟ್ ಸಮತೋಲನಕ್ಕೆ ಕೊಡುಗೆ ನೀಡುತ್ತದೆ
ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು: ಮೊದಲೇ ಹೇಳಿದಂತೆ ಈರುಳ್ಳಿ ಸಿಪ್ಪೆಯಲ್ಲಿ ಕ್ವೆರ್ಸೆಟಿನ್ ನಂತಹ ಹೆಚ್ಚಿನ ಮಟ್ಟದ ಫ್ಲೇವನಾಯ್ಡ್ಗಳಿವೆ. ಇವುಗಳಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿ ಆಕ್ಸಿಡೆಂಟ್ ಗುಣಗಳಿವೆ. ಈ ಉತ್ಕರ್ಷಣ ನಿರೋಧಕಗಳು ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ಗಳನ್ನು ತಟಸ್ಥಗೊಳಿಸಲು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದ್ರೋಗ ಮತ್ತು ಕ್ಯಾನ್ಸರ್ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತಾರೆ
ಉರಿಯೂತದ ಗುಣಲಕ್ಷಣಗಳು: ಕ್ವೆರ್ಸೆಟಿನ್ ಸೇರಿದಂತೆ ಈರುಳ್ಳಿ ಸಿಪ್ಪೆಯಲ್ಲಿ ಕಂಡು ಬರುವ ಸಂಯುಕ್ತಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಅಲ್ಲದೇ ಈರುಳ್ಳಿ ಸಿಪ್ಪೆಯ ರಸ ಅಥವಾ ಕಷಾಯವನ್ನು ಕುಡಿಯುವುದರಿಂದ ಸಂಧಿವಾತ ಮತ್ತು ಉರಿಯೂತದ ಕರುಳಿನ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ
ತ್ವಚೆಯ ಆರೋಗ್ಯ: ಈರುಳ್ಳಿ ಸಿಪ್ಪೆಯು ತ್ವಚೆಯ ಆರೋಗ್ಯವನ್ನು ಸುಧಾರಿಸುವ ಪ್ರಮುಖ ಜೀವಸತ್ವಗಳು, ಖನಿಜಗಳು ಮತ್ತು ಫ್ಲೇವನಾಯ್ಡ್ಗಳನ್ನು ಒಳಗೊಂಡಿರುವ ಸಂಯುಕ್ತಗಳನ್ನು ಹೊಂದಿದೆ. ಹೀಗಾಗಿ ಈರುಳ್ಳಿ ಸಿಪ್ಪೆಯ ರಸವನ್ನು ತ್ವಚೆಗೆ ಹಚ್ಚುವುದರಿಂದ ಚರ್ಮದ ಕಿರಿಕಿರಿಯಿಂದ ಪರಿಹಾರವನ್ನು ಪಡೆಯಬಹುದು. ಇದು ತ್ವಚೆಯ ಮೇಲಿನ ಮೊಡವೆಗಳು ಮತ್ತು ಗಾಯಗಳನ್ನು ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ.
ಕೂದಲಿನ ಆರೋಗ್ಯ: ಈರುಳ್ಳಿ ಸಿಪ್ಪೆಯ ರಸಗಳನ್ನು ಕೆಲವೊಮ್ಮೆ ಕೂದಲ ರಕ್ಷಣೆಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಏಕೆಂದರೆ ಈರುಳ್ಳಿ ರಸದಲ್ಲಿರುವ ಸಂಯುಕ್ತಗಳು ನಮ್ಮ ಕೂದಲು ಕಿರುಚೀಲಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೆಲವರು ಈರುಳ್ಳಿ ಸಿಪ್ಪೆಯ ರಸವನ್ನು ನ್ಯಾಚುರಲ್ ಹೇರ್ ಕಂಡಿಷನರ್ ಆಗಿ ಬಳಸುತ್ತಾರೆ.
ಇರುವುದರಿಂದ ಇದು ಆರೋಗ್ಯಕರ ಕರುಳಿನ ಚಲನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತದೆ. ಈರುಳ್ಳಿ ಸಿಪ್ಪೆಯಲ್ಲಿ ಕಂಡು ಬರುವ ಫ್ಲೇವನಾಯ್ಡ್ಗಳು ಪ್ರೀಬಯಾಟಿಕ್ ಪರಿಣಾಮಗಳನ್ನು ಬೀರಬಹುದು, ಇದು ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ. ಈರುಳ್ಳಿ ಸಿಪ್ಪೆಯನ್ನು ಚಹಾ ಅಥವಾ ಮಸಾಲೆಯಾಗಿ ಬೇಯಿಸಿ, ಕೂಡ ತಿನ್ನಬಹುದು.
ನೈಸರ್ಗಿಕ ಬಣ್ಣ: ಈರುಳ್ಳಿ ಸಿಪ್ಪೆ, ಮೊಟ್ಟೆಯನ್ನು ನ್ಯಾಚುರಲ್ ಹೇರ್ ಕಲರಿಂಗ್ ಆಗಿ ಸಹ ನೀವು ಬಳಸಬಹುದು. ಸಾಮಾನ್ಯವಾಗಿ, ಈರುಳ್ಳಿಯ ಹೊರ ಸಿಪ್ಪೆಯ ರಸವನ್ನು ರುಬ್ಬಿ ಸೋಸಿಕೊಂಡು ಹೊರತೆಗೆದು, ಹಳದಿ, ಕಿತ್ತಳೆ ಮತ್ತು ಕಂದು ಬಣ್ಣ ಹೀಗೆ ವಿವಿಧ ರೀತಿಯ ಬಣ್ಣಗಳ ಜೊತೆಗೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಬಹುದು.