ಬೆಂಗಳೂರು: ಅವ್ರು ಒಂದು ರೇಂಜ್ ನ ರ್ಯಾಂಕಿಂಗ್ ಅಧಿಕಾರಿಗಳು.. ಇಲಾಖೆಗಳಲ್ಲಿ ಕೆಲಸ ಮಾಡಿ ಕೋಟಿ ಕುಳ ಅನ್ನಿಸಿಕೊಂಡಿದ್ದವರು.. ಆದಾಯಕ್ಕೂ ಮೀರಿ ಅಸಮತೋಲನ ಆಸ್ತಿ ಗಳಿಸಿರೋ ಆರೋ ಹೊತ್ತಿರೋರು.. ಆ ಭ್ರಷ್ಟ ಅಧಿಕಾರಿಗಳು ಕಣ್ಬಿಡ್ತಿದ್ದಂತೆಯೇ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ರು. ಹೌದು.. ಇವತ್ತು ಬೆಳ್ ಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ.. ನಾಲ್ವರು ಭ್ರಷ್ಟಾಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಬೆಳ್ಳಗ್ಗೆ ಏಳು ಗಂಟೆಗಳಿಂದ್ಲೂ ಪರಿಶೀಲನೆ ನಡೆಸ್ತಿದ್ದಾರೆ.. ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ, ಮಂಗಳೂರಿನ 25ಕಡೆ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಭೇಟಿಯಾಡಿದ್ದಾರೆ..
ಅಂದ್ಹಾಗೆ ಕನಕಪುರ ರಸ್ತೆಯ ವಾಜರಹಳ್ಳಿ ಬಳಿ ಇರೋ ಅಬಕಾರಿ ಸೂಪರಿಂಟೆಂಡೆಂಟ್ ಮೋಹನ್ ವಿಲ್ಲಾ ಮೇಲೆ ಮತ್ತು ಗಿರಿನಗರ ಬಳಿಯ ಡೈರೆಕ್ಟರ್ ಆಫ್ ಟೌನ್ ಪ್ಲಾನಿಂಗ್ ಡೈರೋಕ್ಟರಿಯಲ್ ಕೆ ತಿಪ್ಪೇಸ್ವಾಮಿ ಬಂಗಲೆ ಮೇಲೆ ಲೋಕಾಯುಕ್ತ ಟೀಂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.. ಇಬ್ಬರ ವಿರುದ್ಧವೂ ಭ್ರಷ್ಟಚಾರ, ಅಸಮತೋಲನ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿತ್ತು.. ಆರೋಪ ಹಿನ್ನೆಲೆ ಬೆಳಗ್ಗೆ 7ಗಂಟೆ ಯಿಂದಲೂ ಲೋಕಾಯುಕ್ತ ಎಸ್ ಪಿ ಶ್ರೀನಾಥ್ ಮಹದೇವ್ ಜೋಷಿ ನೇತೃತ್ವದಲ್ಲಿ ನಡೆಸಿ ಪರಿಶೀಲನೆ ನಡೆಸಲಾಯ್ತು.
ಅಬ್ಬಾಬ್ಬ.. ನೀಲಗಿರಿ ಎಲೆಗಳಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?
. ಈ ವೇಳೆ ಇಬ್ಬರ ಮನೆಯಲ್ಲೂ ಕೂಡ ಮೌಲ್ಯದ ಚಿನ್ನಾಭರಣ, ಕಂತೆಗಟ್ಟಲೆ ಕ್ಯಾಶ್, ಬೆಳ್ಳಿ ವಸ್ತುಗಳು, ಆಸ್ತಿ ಪತ್ರಗಳು ಸೇರಿ ಅವ್ರವ್ರ ಇಲಾಖೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಸಿಕ್ಕಿವೆ.. ಅದ್ರಲ್ಲೂ ಕೂಡ ಗಿರಿನಗರದ ತಿಪ್ಪೇಸ್ವಾಮಿ ಬಂಗಲೆಯಲ್ಲಿ ಮಾತ್ರ ಅಪಾರ ಮೌಲ್ಯದ ಚಿನ್ನದ ಸರಗಳು, ಬಳೆಗಳು, ಬೆಲೆ ಬಾಳುವ ವಾಚ್ ಗಳು, ಎಂಟು ಲಕ್ಷಕ್ಕೂ ಅಧಿಕ ಕ್ಯಾಶ್ , ಪ್ರಮುಖ ದಾಖಲೆಗಳು ಪತ್ತೆಯಾಗಿವೆ..
ಇನ್ನು ಕನಕಪುರ ರಸ್ತೆಯ ವಾಜರಹಳ್ಳಿಯ ಮೋಹನ್ ವಿಲ್ಲಾದಲ್ಲಿ ಕೂಡ ಚಿನ್ನಾಭರಣ, ಆಸ್ತಿ ವಸ್ತ್ರಗಳು, ಬ್ಯಾಂಕ್ ಡೀಟೆಲ್ಸ್ ಗಳು ಸಿಕ್ಕಿವೆ.. ಎರಡೂ ಕಡೆ ಕುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿರೋ ಎಸ್ ಪಿ ಶ್ರೀನಾಥ್ ಮಹದೇವ್ ಜೋಷಿ ದಾಳಿ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದ್ರು.. ಒಂದಷ್ಟು ಬ್ಯಾಂಕ್ ದಾಖಲೆಗಳು ಪತ್ತೆಯಾದ ಹಿನ್ನೆಲೆ ಅಬಕಾರಿ ಸೂಪರಿಂಟೆಂಡೆಂಟ್ ಮೋಹನ್ ಹಾಗೂ ಅವ್ರ ಪತ್ನಿಯನ್ನ ತಲಘಟ್ಟಪುರದ ಬ್ಯಾಂಕ್ ಗೆ ಕರೆದೊಯ್ದ ಲೋಕಾಯುಕ್ತ ಅಧಿಕಾರಿಗಳು ಅವ್ರ ಅಕೌಂಟ್ ಡೀಟೆಲ್ಸ್ ಪರಿಶೀಲನೆ ನಡೆಸಿದ್ದಾರೆ..
ಈ ವೇಳೆ ಇವ್ರ ಆದಾಯ ಎಷ್ಟು ಇವ್ರಿಗೆ ಸಂಬಂಧಿದ ಅಕೌಂಟ್ ಗಳಿಗೆ ಎಷ್ಟು ಟ್ರಾಂಜಾಕ್ಷನ್ ಆಗಿದೆ.. ಹೀಗೆ ಹಲವು ಮಾಹಿತಿ ನೋಟ್ ಮಾಡ್ಕೊಂಡಿದ್ದು ದಾಳಿ ಮುಂದಿವರೆಸಿದ್ದಾರೆ.. ಇನ್ನು ಯಲಹಂಕದಲ್ಲಿರೋ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆಯಲ್ಲೂ ಕೂಡ ಕ್ಯಾಶ್, ಚಿನ್ನಾಭರಣ, ಆಸ್ತಿ ಪತ್ರಗಳು ಸಿಕ್ಕಿವೆ.. ಹಲವು ಗಂಟೆಗಳ ಕಾಲ ಪರಿಶೀಲನೆ ನಡೆಸಿರೋ ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿದೆ.. ಇನ್ನೂ ಕೂಡ ದಾಳಿ ಮುಂದುವರೆದಿದ್ದು ಮತ್ತಷ್ಟು ಸಂಪತ್ತು ಪತ್ತೆಯಾಗುವ ಸಾಧ್ಯತೆ ಇದೆ..