ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ಗೆ ಇಂದು ಟೆನ್ಷನ್ ಡೇ ಆಗಿದೆ. ನಟ ದರ್ಶನ್ಗೆ ಹೈಕೋರ್ಟ್ ಅಕ್ಟೋಬರ್ 30ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಬೆಂಗಳೂರಿ ಪೊಲೀಸರು ನಿರ್ಧರಿಸಿದ್ದಾರೆ.
ಇನ್ನೂ ಇಂದು ಹೈಕೋರ್ಟ್ನಲ್ಲಿ ದರ್ಶನ್ ರೆಗ್ಯೂಲರ್ ಬೇಲ್ ಅರ್ಜಿ ವಿಚಾರಣೆ ನಡೆಯಲಿದೆ. ರೆಗ್ಯೂಲರ್ ಬೇಲ್ಗಾಗಿ ದರ್ಶನ್ ಪರ ಲಾಯರ್ ವಾದ ಮಂಡಿಸಲಿದ್ದಾರೆ. ಈ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಎಸ್ಪಿಸಿ ತಯಾರಿ ಮಾಡಿಕೊಂಡಿದ್ದಾರೆ. ಮತ್ತೊಂದ್ಕಡೆ ಮಧ್ಯಂತರ ಬೇಲ್ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಾಗಿದೆ.ನಟ ದರ್ಶನ್ ಅವರ ಆಪ್ತ ಗೆಳತಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಸೇರಿ 5 ತಿಂಗಳು ಕಳೆದಿದ್ರೂ ಜಾಮೀನು ಸಿಕ್ಕಿಲ್ಲ.
ರೈತರೇ ಗಮನಿಸಿ.. ಅಣಬೆ ಕೃಷಿ ಮಾಡುವರಿಗೆ ಶೆಡ್ ನಿರ್ಮಾಣಕ್ಕಾಗಿ ಶೇ.50 ಸಬ್ಸಿಡಿ! ಇಂದೇ ಅರ್ಜಿ ಸಲ್ಲಿಸಿ
ಇಂದು ಪವಿತ್ರಾಗೌಡ ಸೇರಿ ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಬೇಲ್ ಸಿಗುವ ನಿರೀಕ್ಷೆಯಲ್ಲಿ ಪವಿತ್ರಾ ಗೌಡ ಇದ್ದಾರೆ. ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿಯವರ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯಲಿದೆ. ದರ್ಶನ್, ಪವಿತ್ರಾ ಗೌಡ, ಆರ್. ನಾಗರಾಜು, ಅನುಕುಮಾರ್, ಎಂ.ಲಕ್ಷ್ಮಣ್, ಜಗದೀಶ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆೆ. ಜೊತೆಗೆ ಇವತ್ತೇ ದರ್ಶನ್ ಸರ್ಜರಿ ಬಗ್ಗೆ ವಕೀಲರಿಂದ ಕೋರ್ಟ್ಗೆ ಮಾಹಿತಿ ನೀಡಬೇಕಾಗಿದೆ.