ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟ ಜೋರಾಗುತ್ತಿದೆ. 50ನೇ ದಿನಕ್ಕೆ ವೈಲ್ಡ್ ಕಾರ್ಡ್ ಮೂಲಕ ಶೋಭಾ ಶೆಟ್ಟಿ ಹಾಗೂ ರಜತ್ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ವೇದಿಕೆಗೆ ಕಾಲಿಡ್ತಿದ್ದಂಗೆ ಇಬ್ಬರು ಸಾಕಷ್ಟು ಮಾತನಾಡಿದ್ದರು. ಅಲ್ಲದೆ ಶೋಭಾ ಶೆಟ್ಟಿ ಜೋರು ಧ್ವನಿಯಲ್ಲಿ ಕಿರುಚಾಡುತ್ತಾ ಎಲ್ಲರಿಗೂ ನಡುಕ ಹುಟ್ಟಿಸಲು ಪ್ರಯತ್ನಿಸಿದ್ದರು. ಆದರೆ ಮೊದಲ ಆಟದಲ್ಲೇ ಶೋಭಾ ಶೆಟ್ಟಿಗೆ ಹಿನ್ನಡೆ ಆಗಿದೆ ಇದರಿಂದ ಶೋಭಾ ಕಣ್ಣೀರು ಹಾಕಿದ್ದಾರೆ.
ಇಂದಿನ ಸಂಚಿಕೆಯಲ್ಲಿನ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಅದರಲ್ಲಿ ಶೋಭಾ ಮತ್ತು ಭವ್ಯಾ ಗೌಡ ನೇತೃತ್ವದಲ್ಲಿ ಎರಡು ಟೀಮ್ಗಳಾಗಿ ವಿಂಗಡಿಸಿದ್ದಾರೆ. ಎದುರಾಳಿ ತಂಡ ಭವ್ಯಾಗಿಂತ ವೇಗವಾಗಿ ಟಾಸ್ಕ್ ಪೂರ್ಣಗೊಳಿಸಬೇಕು ಎಂಬ ಆತುರದಲ್ಲಿ ಶೋಭಾ ಆಟ ಆಡುವಾಗ ಎತ್ತರದಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಸಹಸ್ಪರ್ಧಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಎತ್ತರದಿಂದ ಬಿದ್ದರೂ ಕೂಡ ಅವರು ಆಟ ನಿಲ್ಲಿಸಲಿಲ್ಲ. ದೇವರ ಸ್ಮರಣೆ ಮಾಡುತ್ತಾ ಆಟ ಮುಂದುವರಿಸಿದರು. ಹಾಗಿದ್ದರೂ ಕೂಡ ಅವರಿಗೆ ಗೆಲವು ಸಿಗಲಿಲ್ಲ.
ಅಂತಿಮವಾಗಿ ಭವ್ಯಾ ಅವರ ತಂಡ ಈ ಟಾಸ್ಕ್ನಲ್ಲಿ ಗೆಲುವು ಸಾಧಿಸಿತು. ಶೋಭಾ ಶೆಟ್ಟಿ ಅವರು ಸೋಲು ಕಂಡರು. ಸೋತ ಬಳಿಕ ಶೋಭಾ ಶೆಟ್ಟಿ ಅವರಿಗೆ ಸಿಕ್ಕಾಪಟ್ಟೆ ಬೇಸರ ಆಗಿದೆ. ಒಬ್ಬರೇ ಕುಳಿತು ಅಳಲು ಆರಂಭಿಸಿದರು. ಆಗ ಉಗ್ರಂ ಮಂಜು ಮುಂತಾದವರು ಬಂದು ಸಮಾಧಾನ ಮಾಡಿದರು. ಜೋರು ಜೋರಾಗಿ ಜಗಳ ಮಾಡುತ್ತಿದ್ದ ಶೋಭಾ ಶೆಟ್ಟಿ ಅವರು ಕೇವಲ ಒಂದು ಟಾಸ್ಕ್ ಸೋತಿದ್ದಕ್ಕೆ ಕಣ್ಣೀರು ಹಾಕಿದಾಗ ಎಲ್ಲರಿಗೂ ಅಚ್ಚರಿ ಆಗಿದೆ.