ಬೆಂಗಳೂರು: ಮನೆಯಲ್ಲಿ ಸ್ನಾನಕ್ಕೆ ಅಂತಾ ನೀರು ಕಾಯಿಸಲು ಹೀಟರ್ ಅನ್ನು ಹಾಕಲಾಗಿತ್ತು… ಆದ್ರೆ ಅದೇ ವಾಟರ್ ಹೀಟರ್ ನಿಂದು ಒಂದು ಪ್ರಾಣವೇ ಹಾರಿಹೋಗಿದೆ. ಸ್ನಾನಕ್ಕೆಂದು ಹೀಟರ್ ಹಾಕಿದ್ದ ವೇಳೆ ಮಗು ಅದನ್ನು ಕೈಯಲ್ಲಿ ಹಿಡಿದಿದೆ. ಈ ವೇಳೆ ಮಗುವನ್ನು ರಕ್ಷಿಸಲು ಹೋಗಿ ತಾಯಿ ಸಾವನ್ನಪ್ಪಿದ್ದಾಳೆ. ಬೆಂಗಳೂರಿನ ಆವಲಹಳ್ಳಿ ಠಾಣಾ ವ್ಯಾಪ್ತಿಯ ಕೆ.ದೊಮ್ಮಸಂದ್ರ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ಅರುಣಾ (31) ಮೃತ ದುರ್ದೈವಿ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗೊ ರು ಚನ್ನಬಸಪ್ಪ ಆಯ್ಕೆ
ಸ್ನಾನಕ್ಕೆಂದು ಹೀಟರ್ ಮೂಲಕ ನೀರು ಕಾಯಿಸಲು ಹಾಕಿದ್ದಳು. ತನ್ನ ಒಂದೂವರೆ ವರ್ಷದ ಮಗು ಲಿತ್ವಿಕ್ ಆಟವಾಡುವಾಗ ಅದನ್ನು ಹಿಡಿದುಕೊಂಡು ಚೀರಾಡಿದಾಗ ತಾಯಿ ಅದನ್ನು ತಪ್ಪಿಸಲು ಹೋಗಿ ಗಂಭೀರ ಗಾಯಕೊಂಡಿದ್ದಳು. ಕೂಡಲೇ ಅಕ್ಕಪಕ್ಕದವರೆಲ್ಲ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ. ಅದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಇನ್ನೂ ಮಗು ಕೂಡಾ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.