ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್, ಎಪಿಎಲ್ ಕಾರ್ಡ್ ರದ್ದು ವಿಚಾರ ಭಾರೀ ಸುದ್ದಿ ಮಾಡುತ್ತಿದೆ. ವಿಪಕ್ಷಗಳು ಇದೇ ವಿಚಾರವನ್ನು ಅಸ್ತ್ರವಾಗಿಸಿಕೊಂಡು ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ. ಇದೀಗ ಸರ್ಕಾರ ಮತ್ತೊಂದು ಆಪರೇಷನ್ ಗೆ ಇಳಿದಂತಿದೆ. ಹೌದು, ರಾಜ್ಯದಲ್ಲಿ ರೇಷನ್ ಕಾರ್ಡ್ ರದ್ದತಿಯ ಬೆನ್ನಲ್ಲೇ ಕಾರ್ಮಿಕರ ಕಾರ್ಡ್ ರದ್ದು ಮಾಡಿದೆ. ರಾಜ್ಯದಲ್ಲಿ 2.46 ಲಕ್ಷ ಕಾರ್ಮಿಕರ ಕಾರ್ಡ್ ಅಮಾನತು ಮಾಡಲಾಗಿದೆ.
ಕಾರ್ಮಿಕ ಇಲಾಖೆಯು 2,46,951 ಕಾರ್ಡ್ ನ್ನು ನಕಲಿ ಎಂದು ರದ್ದು ಮಾಡಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಬರೋಬ್ಬರಿ 38 ಲಕ್ಷದ 42 ಸಾವಿರ ಕಾರ್ಮಿಕರು ನೋಂದಣಿ ಮಾಡಲಾಗಿದೆ. 38.42 ಲಕ್ಷದ ಪೈಕಿ 2.46 ಲಕ್ಷ ಕಾರ್ಡ್ ಅಮಾನತು ಮಾಡಲಾಗಿದ್ದು, ಹಾವೇರಿಯಲ್ಲಿ ಅತೀ ಹೆಚ್ಚು ಎಂದರೆ 1,69,180 ಕಾರ್ಡ್ ಗಳು ರದ್ದು ಮಾಡಲಾಗಿದೆ.