ಕೋಲಾರ : ಅರ್ಹರಲ್ಲದ ಬಿಪಿಎಲ್ ಕಾರ್ಡ್ ಮಾತ್ರ ರದ್ದಾಗುವುದು ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ಗೆ ಅರ್ಹರಲ್ಲದ ಕಾರ್ಡ್ ಗಳು ಮಾತ್ರ ಬದಲಾವಣೆ ಆಗುತ್ತೆ. BPL ಕಾರ್ಡ್ ರದ್ದು ಮಾಡಲ್ಲ, ಅವರನ್ನು APL ಕಾರ್ಡ್ ಗೆ ಬದಲಾವಣೆ ಮಾಡ್ತೇವೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಶೇ.50ಕ್ಕೂ ಹೆಚ್ಚು BPL ಕಾರ್ಡ್ ಇಲ್ಲ. ಕರ್ನಾಟಕ ಆರ್ಥಿಕವಾಗಿ ಸುಭದ್ರವಿರುವ ರಾಜ್ಯ, ತೆರಿಗೆ ಪಾವತಿಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಕರ್ನಾಟಕದಲ್ಲಿ 75 ರಿಂದ 80 ಪರ್ಸೆಂಟ್ ಬಿಪಿಎಲ್ ಕಾರ್ಡ್ ಇರೋದಕ್ಕೆ ಸಾಧ್ಯನ ಅನ್ನೋದಉ ಪ್ರಶ್ನೆ. 10 ವರ್ಷಗಳಿಂದ ಎಲ್ಲಾ ಸರ್ಕಾರಗಳಲ್ಲಿ ಕಾರ್ಡ್ ನೀಡಲಾಗಿದೆ. ಐಟಿ ಪಾವತಿದಾರರು, ಸರ್ಕಾರಿ ಕೆಲಸದವರು,1ಲಕ್ಷ 20 ಸಾವಿರ ಆದಾಯ ಮೀರಿದವರನ್ನು ಎಪಿಎಲ್ ಕಾರ್ಡ್ ಗೆ ಬದಲಾವಣೆ ಮಾಡ್ತೇವೆ. ಅಂಕಿ ಅಂಶಗಳ ಜೊತೆ ನಾಳೆ ಪತ್ರಿಕಾಗೋಷ್ಠಿ ಮಾಡ್ತೇನೆ. ಎಂದರು.
ಅಕಸ್ಮಾತ್ ಬಡವರ ಕಾರ್ಡ್ ರದ್ದಾಗಿದ್ರೆ ತಹಶೀಲ್ದಾರ್ ಗೆ ಅರ್ಜಿ ಹಾಕಲಿ, ಕಾರ್ಡ್ ಸಿಗುತ್ತೆ.ಅಪ್ಪಿತಪ್ಪಿ ಬಿಪಿಎಲ್ ಕಾರ್ಡ್ ರದ್ದು ಆಗಿದ್ರೆ ವಾಪಸ್ಸು ಕೊಡಲು ಸೂಚಿಸಿದ್ದಾರೆ. ಅರೋಗ್ಯಕ್ಕಾಗಿ ಕಾರ್ಡ್ ಬೇಕು ಅಂದ್ರೆ ಒಂದೇ ವಾರದಲ್ಲಿ ನೀಡ್ತೇವೆ. ಇನ್ನೂ ಬಿಜೆಪಿ ಮಾಡುತ್ತಿರುವ ಆರೋಪದಲ್ಲಿ ವಾಸ್ತವಾಂಶ ಇಲ್ಲ.ಬಿಪಿಎಲ್ ಕಾರ್ಡ್ ನವರಿಗೆ ಕೊಡಲು 2 ಸಾವಿರ ಕೋಟಿ ಕೊಡುತ್ತಿದ್ದಾರೆ. ಆದರೂ 700 ಕೋಟಿ ಮೇಲೆ ಖರ್ಚು ಆಗ್ತಿಲ್ಲ, ಸಕಾಲಕ್ಕೆ ಹಣ ಹೋಗ್ತಿದೆ. ಸಿಎಂ ಸಿದ್ದರಾಮಯ್ಯ 14 ಬಜೆಟ್ ಮಂಡಿಸಿದ್ದಾರೆ,ಆರ್ಥಿಕ ಪರಿಸ್ಥಿತಿ ಸಮತೋಲನ ಮಾಡೋದು ಗೊತ್ತಿದೆ ಎಂದರು