ಬೆಂಗಳೂರು: ನಬಾರ್ಡ್ ನ ನಿಂದ ಕೊಡುವ ಸಾಲ ಕಡಿತ ಮಾಡಿರುವ ವಿಚಾರವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಎಂ, ನಾಳೆ ನಿರ್ಮಲಾ ಸೀತಾರಾಮನ್ ರನ್ನು ಭೇಟಿ ಮಾಡುತ್ತೇನೆ. ನಬಾರ್ಡ್ನಿಂದ ಸಾಲ ಕೋಡೋದು ಕಡಿಮೆ ಮಾಡಿದ್ದಾರೆ. ಕಳೆದ ಬಾರಿ ೫೬೦೦ ಕೋಟಿ ಕೊಟ್ಟಿದ್ದರು. ಆದರೆ, ಈ ವರ್ಷ ೨೩೬೦ ಕೋಟಿ ಮಾತ್ರ ನೀಡಿದ್ದಾರೆ. ಸುಮಾರು ೫೮% ಕಡಿಮೆ ಕೊಟ್ಟಿದ್ದಾರೆ. ಹಾಗಾಗಿ ನಿರ್ಮಲಾ ಸೀತಾರಾಮನ್ ಗೆ ಮನವಿ ಮಾಡುತ್ತೇವೆ. ಇದೇ ವೇಳೆ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವ ವಿಚಾರವಾಗಿ ಮಾತನಾಡಿ, ನಾಳೆ ಸಾಯಂಕಾಲ ಟೈಮ್ ಸಿಕ್ಕರೆ ಭೇಟಿ ಮಾಡುತ್ತೇನೆ ಎಂದಿದ್ದಾರೆ.
“ಅಂಗೈ ಹುಣ್ಣಿಗೆ ಕನ್ನಡಿ ಬೇಕೇ”: ಡಿಸಿಎಂ ಡಿಕೆಶಿಗೆ ಜೆಡಿಎಸ್ ತಿರುಗೇಟು
ವಿಕ್ರಮ್ ಗೌಡ ಎನ್ ಕೌಂಟರ್ ಕುರಿತು ಶಂಕೆ ವ್ಯಕ್ತವಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಮೊದಲು ಸರೆಂಡರ್ ಆಗಬೇಕು ಎಂದು ಕೇಳಿದ್ದಾರೆ. ಅವರು ಸರೆಂಡರ್ ಆಗಲಿಲ್ಲ. ಕೇರಳ ಸರ್ಕಾರ ಮತ್ತು ನಾವು ಅವರನ್ನು ಹಿಡಿದುಕೊಟ್ಟವರಿಗೆ ಬಹುಮಾನವನ್ನೂ ಘೋಷಿಸಿದ್ದೆವು. ಅವರು ಶರಣಾಗಲೇ ಇಲ್ಲ. ಹಾಗಾಗಿ ಅವರನ್ನ ಎನ್ ಕೌಂಟರ್ ಮಾಡಿದ್ದಾರೆ . ಅದನ್ನ ನೀವು ಪ್ರಶಂಸಿಸಬೇಕು. ನಕ್ಸಲಿಸಂ ಇರಬೇಕೋ ಹೋಗಬೇಕೋ ನೀವೇ ಹೇಳಿ ಎಂದು ಮರು ಪ್ರಶ್ನೆ ಹಾಕಿದ್ದಾರೆ.