ಬೆಂಗಳೂರು: ರಾಜಾಜಿನಗರದ ಇವಿ ಬೈಕ್ ಶೋರೂಂನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಯುವತಿಯ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಬರ್ತ್ ಡೇ ಆಚರಿಸಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಕಳೆದ ಮಂಗಳವಾರ ಬೈಕ್ ಶೋರಂನಲ್ಲಿ ಬೆಂಕಿ ಅವಘಡದಲ್ಲಿ ಮೃತ ಪಟ್ಟ ಯುವತಿ ಪ್ರಿಯಾ ಬದುಕಿದ್ದರೆ ಇಂದು ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಳು. ಆದ್ರೆ ವಿಧಿಯಾಟ.. ಆಕೆಯ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾಳೆ.
ಶಾರ್ಟ್ ಸರ್ಕ್ಯೂಟ್: ಸುಟ್ಟು ಭಸ್ಮವಾದ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್, ಯುವತಿ ಸಜೀವ ದಹನ!
ತನ್ನ ಮಗಳ ಸಾವಿನ ಬಗ್ಗೆ ಮಾತನಾಡಿರುವ ತಂದೆ ಆರ್ಮುಗಂ, ಇವತ್ತು ಬರ್ತ್ ಡೇ ಇತ್ತು, ಬಟ್ಟೆಯೆಲ್ಲಾ ತಂದಿಟ್ಟಿದ್ವಿ . ಕೇಕ್ ತರೋದಕ್ಕೆ ಎಲ್ಲಾ ರೆಡಿ ಮಾಡ್ಕೊಂಡಿದ್ವಿ. ಆದ್ರೆ ಹಿಂಗಾಗಿದೆ ನಂಬೋಕಾಗ್ತಿಲ್ಲ. ನನ್ನ ಮಗಳು ನಮ್ಮ ಮನೆ ಮಹಾಲಕ್ಷ್ಮಿ. ಏನೇನೋ ಕನಸು ಕಂಡಿದ್ಳು. ಮನೆ ಜವಾಬ್ದಾರಿ ಹೊತ್ತಿದ್ಳು. ಕಂಪನಿ ಕಷ್ಟ ಅಂದಾಗ ಕಂಪನಿಗೋಸ್ಕರ ದುಡಿದ್ಳು. ಇಪ್ಪತ್ತು ಜನ ಇರೋ ಕಂಪನಿಗೆ ಹೆಡ್ ಆಗಿದ್ಳು. ಇಪ್ಪತ್ತು ಜನರಲ್ಲಿ ನನ್ನ ಮಗಳು ಮಾತ್ರ ಸತ್ತೋದ್ಳು ಅಂತಿದ್ದಾರೆ. ಹೇಗೆ ಹಂಗಾಗುತ್ತೆ. ಇಷ್ಟೊತ್ತಾದ್ರು, ನನ್ನ ಮಗಳನ್ನ ನೋಡಿಲ್ಲ ಸಾರ್. ಕಂಪನಿಯವರಿಂದ ಒಂದು ಫೋನ್ ಇಲ್ಲ. ಟಿವಿ ನೋಡಿ ವಿಚಾರ ತಿಳ್ಕೊಂಡ್ವಿ.. ನಮಗೆ ನ್ಯಾಯ ಬೇಕು ಸಾರ್. ಕಂಪನಿಯವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.