ರಿಷಬ್ ಪಂತ್ ಡೆಲ್ಲಿ ತಂಡ ತೊರೆಯಲು ಕಾರಣ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಕಳೆದ ಸೀಸನ್ನಲ್ಲಿ 16 ಕೋಟಿ ರೂ. ಪಡೆದಿದ್ದ ರಿಷಭ್ ಪಂತ್ ಈ ಬಾರಿ ಹೆಚ್ಚಿನ ಸಂಭಾವನೆಗಾಗಿ ಬೇಡಿಕೆಯಿಟ್ಟಿದ್ದಾರೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬೃಹತ್ ಮೊತ್ತ ನೀಡಲು ಹಿಂದೇಟು ಹಾಕಿದ್ದರಿಂದ ಅವರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಹರಿದ ಪ್ಯಾಂಟ್ ಧರಿಸೋ ಯುವಕ, ಯುವತಿಯರೇ ಇಲ್ಲಿ ಕೇಳಿ: ಇಂತಹ ಬಟ್ಟೆ ಧರಿಸಿದ್ರೆ ಏನಾಗುತ್ತೆ ಗೊತ್ತಾ!?
ಅಲ್ಲದೆ ಇತ್ತೀಚೆಗೆ ಸುನಿಲ್ ಗವಾಸ್ಕರ್ ಖಾಸಗಿ ಚಾನೆಲ್ವೊಂದರಲ್ಲಿ, ರಿಷಭ್ ಪಂತ್ ಹೆಚ್ಚಿನ ಹಣಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಈ ಆರೋಪದ ಬೆನ್ನಲ್ಲೇ ಇದೀಗ ರಿಷಭ್ ಪಂತ್ ಮೌನ ಮುರಿದಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಸ್ಪಷ್ಟನೆ ನೀಡಿರುವ ಪಂತ್, ಹಣದ ವಿಚಾರಕ್ಕೆ ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸದ್ಯ ಹರಿದಾಡುತ್ತಿರುವ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಪಂತ್ ಹೇಳಿದ್ದಾರೆ
ರಿಷಭ್ ಪಂತ್ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಐಪಿಎಲ್ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮೊದಲ ಸೆಟ್ನಲ್ಲೇ ಸ್ಥಾನ ಪಡೆದಿರುವ ಪಂತ್ ಖರೀದಿಗಾಗಿ ಆರಂಭದಲ್ಲೇ ಭರ್ಜರಿ ಪೈಪೋಟಿ ಕಂಡು ಬರಲಿದೆ. ಈ ಪೈಪೋಟಿಯೊಂದಿಗೆ ರಿಷಭ್ ಪಂತ್ ಯಾವ ತಂಡದ ಪಾಲಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.