ಮೈಸೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಇಲ್ಲದೇ ಲೋಕಾ ಎಸ್ಪಿ ಕಚೇರಿಗೆ ಸಿದ್ದರಾಮಯ್ಯ ಸಂಬಂಧಿ ವಿಸಿಟ್ ಕೊಟ್ಟಿದ್ದಾರೆ.
ರೈಲು ಪ್ರಯಾಣಿಕರ ಗಮನಕ್ಕೆ: ಈ ವಾರಾಂತ್ಯದಲ್ಲಿ ರಾಜ್ಯದ ಕೆಲ ರೈಲುಗಳ ಸಂಚಾರ ರದ್ದು!
ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರನ್ನು ಸಿಎಂ ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಭೇಟಿ ಮಾಡಿದ್ದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.
ಮಂಗಳವಾರ ಮುಡಾದ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ನಟೇಶ್ ವಿಚಾರಣೆ ಮುಗಿದ ಅರ್ಧಗಂಟೆಯ ಬಳಿಕ ಮಲ್ಲಿಕಾರ್ಜುನ ಸ್ವಾಮಿ ಅವರು ಉದೇಶ್ ಅವರನ್ನು ಭೇಟಿಯಾಗಿದ್ದಾರೆ.
ಮಲ್ಲಿಕಾರ್ಜುನ ಸ್ವಾಮಿ ಸಿಎಂ ಪತ್ನಿ ಸೈಟ್ ಪಡೆದ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದಾರೆ. ರಾತ್ರಿ 7:30ಕ್ಕೆ ಲೋಕಾಯುಕ್ತ ಕಚೇರಿಗೆ ದಿಢೀರ್ ಎಂಟ್ರಿ ನೀಡಿದ ಅವರು 8 ಗಂಟೆಯವರೆಗೆ ಕಚೇರಿ ಒಳಗಡೆಯೇ ಇದ್ದರು.
ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತರಿಂದ ನೋಟಿಸ್ ನೀಡಿದ್ದರೆ ಸಾಧಾರಣವಾಗಿ ಆರೋಪಿಗಳು ಬೆಳಗ್ಗೆ ಅಥವಾ ಮಧ್ಯಾಹ್ನದ ನಂತರ ಹಾಜರಾಗುತ್ತಾರೆ. ಆದರೆ ಇಲ್ಲಿ ವಿಚಾರಣೆಯೂ ಇಲ್ಲ, ನೋಟಿಸ್ ಇಲ್ಲದೇ ಇದ್ದರೂ ರಾತ್ರಿ ವೇಳೆ ತನಿಖಾಧಿಕಾರಿಯನ್ನು ಆರೋಪಿ ಭೇಟಿ ಮಾಡಿದ್ದರಿಂದ ಹಲವು ಅನುಮಾನಗಳು ಹುಟ್ಟಿಕೊಂಡಿದೆ.