ಬೆಂಗಳೂರು:- ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಕೆಲ ರೈಲುಗಳ ಸಂಚಾರ ರದ್ದು ಮಾಡಲಾಗಿದೆ.
ಅಪ್ಪಿತಪ್ಪಿಯೂ ಬೇರೆಯವರಿಗೆ ನಿಮ್ಮ ಕಾರು, ಬೈಕ್ ಕೊಡ್ಬೇಡಿ: ಎಡವಟ್ಟಾದ್ರೆ FIR ಫಿಕ್ಸ್!
ಹಾಗೇ ಕೆಲ ರೈಲುಗಳು ತಡವಾಗಿ ಆರಂಭವಾಗಲಿವೆ. ಈ ಕುರಿತು ನೈಋತ್ಯ ರೈಲ್ವೆ ಸಾಮಾಜಿಕ ಮಾಧ್ಯಮ ಎಕ್ಸ್ ಮುಖಾಂತರ ತಿಳಿಸಿದೆ.
ನಿಡವಂದ ಯಾರ್ಡ್ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ನಡೆಯಲಿದೆ. ಹೀಗಾಗಿ ತುಮಕೂರು-ಬಾಣಸವಾಡಿ ಮೆಮು ವಿಶೇಷ ರೈಲು ಮತ್ತು ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್ ಪ್ರೆಸ್ ರೈಲು ರದ್ದಾಗಲಿದೆ.
ನವೆಂಬರ್ 23 ರಂದು ತುಮಕೂರು-ಬಾಣಸವಾಡಿ ಮೆಮು ವಿಶೇಷ ರೈಲು (06512), ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್ ಪ್ರೆಸ್ ರೈಲು (16239) ಮತ್ತು ಯಶವಂತಪುರ- ಚಿಕ್ಕಮಗಳೂರು ಡೈಲಿ ಎಕ್ಸ್ ಪ್ರೆಸ್ (16240) ರೈಲುಗಳ ಸಂಚಾರ ರದ್ದಾಗಲಿದೆ.
ನವೆಂಬರ್ 23 ಮತ್ತು 24 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ಮಮು ವಿಶೇಷ (06571) ರೈಲು ಸೇವೆಯನ್ನು ದೊಡ್ಡಬೆಲೆ-ತುಮಕೂರು ನಡುವೆ ಮತ್ತು ತುಮಕೂರು-ಕೆಎಸ್ಆರ್ ಬೆಂಗಳೂರು ಮಮು ವಿಶೇಷ (06576) ರೈಲು ಸೇವೆಯನ್ನು ತುಮಕೂರು-ದೊಡ್ಡಬೆಲೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿವೆ. ನವೆಂಬರ್ 23 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (06575) ರೈಲು ದೊಡ್ಡಬೆಲೆ-ತುಮಕೂರು ನಡುವೆ ಮತ್ತು ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ (06572) ರೈಲು ಸೇವೆಯನ್ನು ತುಮಕೂರು-ದೊಡ್ಡಬೆಲೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ.
ನವೆಂಬರ್ 22 ರಂದು ಹೊರಡುವ ರೈಲು ಸಂಖ್ಯೆ 17392 ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ ರೈಲನ್ನು ಮಾರ್ಗದಲ್ಲಿ 20 ನಿಮಿಷ, ನವೆಂಬರ್ 24 ರಂದು ಹೊರಡುವ ರೈಲು ಸಂಖ್ಯೆ 20652 ತಾಳಗುಪ್ಪ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ ರೈಲನ್ನು ಮಾರ್ಗದಲ್ಲಿ 30 ನಿಮಿಷ ಮತ್ತು ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗದಲ್ಲಿ 120 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.