ಕಲಬುರಗಿ:-ಬಿಜೆಪಿಯಲ್ಲಿ ಭ್ರಷ್ಟಾಚಾರ ಇದ್ದದ್ದು ನಿಜ, “ಲೋಕಾ” ತನಿಖೆಯಲ್ಲಿ ಅನುಮಾನ ಇದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ಹೇಳಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ವಿರುದ್ದದ 40 ಪರ್ಸೆಂಟ್ ಆರೋಪ ಸುಳ್ಳು ಎನ್ನೋ ಲೋಕಾ ವರದಿ ವಿಚಾರವಾಗಿ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಜಗನ್ನಾಥ ಶೇಗಜಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ನಮ್ಮ ಮಾಜಿ ಅಧ್ಯಕ್ಷ ದಿ.ಕೆಂಪಣ್ಣ ಮಾಡಿದ್ದ ಆರೋಪ ಸತ್ಯ. ವಿಪಕ್ಷ ನಾಯಕ ಆರ್ ಅಶೋಕ್ ಮತ್ತು ವಿಜಯೇಂದ್ರ ನಮ್ಮ ಸಂಘದ ಹೆಸರು ತೆಗೆದುಕೊಂಡು ಕೆಂಪಣ್ಣರವ ಹೆಸರು ತೆಗೆದುದಕೊಂಡು ಲಘವಾಗಿ ಮಾತನಾಡಿದ್ದಾರೆ.
ಅಂಬಿಕಾಪತಿ ದೂರು ನಮ್ಮ
ಅಸೋಸಿಯೇಷನ್ ನಿಂದ ಹೋಗಿಲ್ಲ. ಅಂಬಿಕಾಪತಿ ನೀಡಿದ ದೂರಿಗೂ ನಮ್ಮ ಸಂಘಕ್ಕೂ ಸಂಬಂಧವಿಲ್ಲ. ಒಂದೇ ಒಂದು ಪತ್ರ ಲೋಕಾಯುಕ್ತಕ್ಕೆ ನೀಡಿಲ್ಲ. ಅದರ ಬಗ್ಗೆ ನಮ್ಮ ಬಳಿ ಎಲ್ಲಾ ದಾಖಲೆಗಳಿವೆ ಎಂದರು.
ಇನ್ನೂ ನ್ಯಾ.ನಾಗಮೋಹನ ದಾಸ್ ಕಮಿಟಿಗೆ ನೀಡಿದ್ದೇವೆ. ನ್ಯಾಯಯುತವಾಗಿ ತನೀಖೆಯಾಗಬೇಕು. ಇಲ್ಲಾಂದ್ರೆ ನಾವು ನ್ಯಾಯಲಯದ ಮೊರೆ ಹೋಗ್ತೆವೆ. ನ್ಯಾ.ನಾಗಮೋಹನ್ ದಾಸ್ ಕಮಿಟಿಯದ್ದು ನಾಳೆ ಫೈನಲ್ ಹೇರಿಂಗ್ ಇದೆ. ನಾಳೆ ಎಲ್ಲಾ ದಾಖಲೆ ನೀಡುತ್ತೆವೆ. ಒಂದು ವೇಳೆ ನಮ್ಮ ಆರೋಪ ಸುಳ್ಳು ಎಂದಾದ್ರೆ, ನಾವು ಯಾವುದೇ ಶಿಕ್ಷೆಗೂ ತಯಾರಿದ್ದೇವೆ.
31 ಜಿಲ್ಲೆಯಲ್ಲಿ ನಡೆದ ಪರ್ಸೆಂಟೆಜ್ ಬಗ್ಗೆ ದಾಖಲೆ ನೀಡಿದ್ದೇವೆ. ನಾಳೆ ಮತ್ತೊಮ್ಮೆ ನ್ಯಾ,ನಾಗಮೋಹನ್ ದಾಸ್ ಎದರು ದಾಖಲೆ ನೀಡ್ತೆವೆ. ಸಧ್ಯದ ಶಾಸಕರು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಎಲ್ಲಾಪಕ್ಷದ ಶಾಸಕರು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.