ಹುಬ್ಬಳ್ಳಿ:- ಪ್ರಚಾರಕ್ಕಾಗಿ ರವಿ ಗಣಿಗ ಬಿಜೆಪಿ ಮೇಲೆ ಗೂಬೆ ಕೂರಿಸ್ತಿದ್ದಾರೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
Hair Care: ಸ್ಪ್ಲಿಟ್ ಹೇರ್ಸ್ ಆಗಿದ್ಯಾ? ಡೋಂಟ್ ವರಿ ಈ ಟಿಪ್ಸ್ ಫಾಲೋ ಮಾಡಿ!
ಈ ಸಂಬಂಧ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡುಗಿನ ತರಹ ಆಗಿದೆ. ಆ ಪಕ್ಷ ತನ್ನಿಂದ ತಾನೇ ಪತನವಾಗುವುದು ಗೋಚರವಾಗುತ್ತಿದೆ ಎಂದರು.
ಕೇವಲ ಪ್ರಚಾರಕ್ಕಾಗಿ ರವಿ ಗಣಿಗ ಅವರು ಇಲ್ಲದ ಸಲ್ಲದ ಹೇಳಿಕೆಗಳನ್ನು ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕರನ್ನು ಖರೀದಿಸುವ ಅವಶ್ಯಕತೆ ಬಿಜೆಪಿಗೆ ಇಲ್ಲ. 100 ಕೋಟಿ ರೂ. ಕೊಟ್ಟು ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಖರೀದಿಸಲು ಯತ್ನಿಸುತ್ತಿದೆ ಎಂಬ ರವಿ ಗಣಿಗ ಅವರ ಹೇಳಿಕೆ ಬಾಲಿಶತನದಿಂದ ಕೂಡಿದೆ ಎಂದರು.
ಈ ಹಿಂದೆ ಬೆಳಗಾವಿ ಶಾಸಕ ರಾಜು ಕಾಗೆ ಅವರು, ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡದಿದ್ದರೆ ನಾನು ರಾಜೀನಾಮೆ ನೀಡಲು ಸಿದ್ಧವೆಂಬ ಹೇಳಿಕೆ ನೀಡಿದ್ದನ್ನು ರವಿ ಗಣಿಗ ಅವರು ಸ್ಮರಿಸಿಕೊಳ್ಳಬೇಕಾಗುತ್ತದೆ. ಈಗಾಗಲೇ ಹತ್ತು ಹಲವಾರು ಶಾಸಕರು ಕಾಂಗ್ರೆಸ್ನಿಂದ ಒಂದು ಕಾಲನ್ನು ಹೊರಗಿಟ್ಟಿದ್ದಾರೆ. ಈ ರೀತಿ ಹಿಟ್ ಆ್ಯಂಡ್ ರನ್ ರೀತಿ ಇಲ್ಲಸಲ್ಲದ ಹೇಳಿಕೆ ನೀಡುವುದರಿಂದ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹರಿಹಾಯ್ದರು.