ರಾಂಚಿ: ಜಾರ್ಖಂಡ್ ನಲ್ಲಿ ನ.20ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ 38 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ 38 ಕ್ಷೇತ್ರಗಳಲ್ಲಿ 27 ಸಾಮಾನ್ಯ, 03 ಎಸ್ಸಿ ಮತ್ತು 08 ಎಸ್ಟಿ ಸ್ಥಾನಗಳು ಸೇರಿವೆ. ಅಂತಿಮ ಹಂತದ ಮತದಾನಕ್ಕೆ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಕೇಂದ್ರ ಪಡೆಗಳು ಹಾಗೂ ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 528 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಅಭ್ಯರ್ಥಿಗಳ ಪೈಕಿ 472 ಪುರುಷರು ಮತ್ತು 55 ಮಹಿಳೆಯರಿದ್ದಾರೆ. ಈ ಬಾರಿ ತೃತೀಯಲಿಂಗಿಯೂ ಕಣದಲ್ಲಿದ್ದಾರೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ.
ಕಣದಲ್ಲಿರುವ ವಿಶೇಷ ಅಭ್ಯರ್ಥಿಗಳು
ಬರ್ಹೆತ್ – ಹೇಮಂತ್ ಸೊರೆನ್ (ಜೆಎಂಎಂ) ಎದುರು ಗಮಾಲಿಯೆಲ್ ಹೆಂಬ್ರಾಮ್
(ಬಿಜೆಪಿ)ನಾಲಾ – ರವೀಂದ್ರನಾಥ್ ಮಹತೋ (ಜೆಎಂಎಂ) ಎದುರು ಮಾಧವ್ ಚಂದ್ರ ಮಹತೋ
(ಬಿಜೆಪಿ). ಧನ್ವರ್ – ಬಾಬುಲಾಲ್ ಮರಾಂಡಿ (ಬಿಜೆಪಿ) ಎದುರು ನಿಜಾಮುದ್ದೀನ್ ಅನ್ಸಾರಿ (ಜೆಎಂಎಂ)
ಗಂಡೆ – ಕಲ್ಪನಾ ಸೊರೆನ್ (ಜೆಎಂಎಂ) ಎದುರು ಮುನಿಯಾ ದೇವಿ (ಬಿಜೆಪಿ)
ಚಂದಂಕಿಯಾರಿ – ಉಮಾಕಾಂತ್ ರಜಾಕ್ (ಜೆಎಂಎಂ) ಎದುರು ಅಮರ್ ಕುಮಾರ್ ಬೌರಿ (ಬಿಜೆಪಿ)