ಉಡುಪಿ: ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಎ ಎನ್ ಎಫ್ , ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತ್ಯೆಯಾಗಿದ್ದಾನೆ. ಆಂತರಿಕ ಭದ್ರತಾ ಡಿಐಜಿ ರೂಪಾ ಮುದ್ಗಿಲ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಮಾತನಾಡಿದ ಅವರು, ಎಎನ್ ಎಫ್ ನಕ್ಸಲ್ ಚಕಮಕಿ ನಡೆದಿದೆ. ಪ್ರಕರಣದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಯುತ್ತಿದೆ. ವಿಕ್ರಮ್ ಗೌಡ ಪಿಟ್ಟಿಕೇಸ್, ಮರ್ಡರ್, ಸೇರಿದಂತೆ ಮೇಲೆ 61 ಕೇಸ್ ಇತ್ತು. ಕೇರಳದಲ್ಲಿ 19 ಕೇಸು ದಾಖಲಾಗಿತ್ತು. ಕಾಡಿನಲ್ಲಿ ನ.10 ರಿಂದ ಕೂಂಬಿಂಗ್ ಮಾಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಇನ್ನೂ ನಾಲ್ಕೈದು ಆಕ್ಟೀವ್ ನಕ್ಸಲರು ಇದ್ದಾರೆ. ಎಎನ್ ಎಫ್ ಆಪರೇಷನ್ ಸತತವಾಗಿ ಜಾರಿಯಲ್ಲಿದೆ. ನಕ್ಸಲರು ಯಾವ ತರದ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ ಎಂದು ಕಾದು ನೋಡಬೇಕು. ಬೆಂಗಳೂರು ಕೆಎಸ್ ಐ ಎಸ್ ಎಫ್ 75 ಸಿಬ್ಬಂದಿ ಅಧಿಕಾರಿಗಳು ಬಂದಿದ್ದಾರೆ. ಶಿವಮೊಗ್ಗದಿಂದ ಸಿಬ್ಬಂದಿ ಕರೆಸಿಕೊಂಡಿದ್ದೇವೆ. ವಿಕ್ರಂ ಗೌಡ ಎಂಕೌಂಟರ್ ಆಪರೇಷನ್ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಳನ್ನ ಕೊಡಲ್ಲ. ತನಿಖೆ ನಡೆಯುತ್ತಿರುವುದರಿಂದ ಯಾವುದೇ ಮಾಹಿತಿಗಳನ್ನು ನೀಡಲಾಗುವುದಿಲ್ಲ ಎಂದರು.