ಹೊಸಕೋಟೆ: ತಿರುಮಲಶೆಟ್ಟಿಹಳ್ಳಿ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳನ್ನು ಬಂಧಿಸಿದ್ದಾರೆ. 46 ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಆರೋಪಿಗಳನ್ನು, 25 ವರ್ಷಗಳ ನಂತರ ಆರೆಸ್ಟ್ ಮಾಡಲಾಗಿದೆ. ಸರ್ದಾರ್ (50) ಮತ್ತು ಸುಹೇಲ್ ( 51) ಬಂಧಿತ ಆರೋಪಿಗಳು.. ದೇವನಜೀವನಹಳ್ಳಿ ಮತ್ತು ಬನಶಂಕರಿ ನಿವಾಸಿಗಳಾಗಿರುವ ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, 25 ವರ್ಷಗಳಿಂದಲೂ ತಲೆಮರೆಸಿಕೊಂಡಿದ್ದರು.
ಇದೀಗ ತಿರುಮಲಶೆಟ್ಟಿಹಳ್ಳಿ ಪೋಲಿಸ್ ಇನ್ಸ್ಪೆಕ್ಟರ್ ಸುಂದರ್ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇವರ ಮೇಲೆ ತಿರುಮಲಶೆಟ್ಟಿಹಳ್ಳಿ ಠಾಣೆಯಲ್ಲಿ 5 ಪ್ರಕರಣಗಳು, ಅನುಗೊಂಡನಹಳ್ಳಿ 5, ಹೊಸಕೋಟೆ 5, ನಂದಗುಡಿ 7, ಕೆಂಗೇರಿ 1, ಸರ್ಜಾಪುರ 1, ವರ್ತೂರು 1, ಜ್ಞಾನಭಾರತಿ 1 ಪ್ರಕರಣ ಮತ್ತು ಮಾಲೂರು ಪೋಲಿಸ್ ಠಾಣೆಯಲ್ಲಿ 20 ಪ್ರಕರಣಗಳು ದಾಖಲಾಗಿವೆ. ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.