ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ನಡುವಿನ ಪ್ರತಿಷ್ಠಿತ ಬಡಾವಣೆಯಾದ ನವನಗರದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಹಾಲಿನ ಅಂಗಡಿ ತೆರೆಯಲು ಅನುಮತಿ ಪಡೆದು, ಲಿಕ್ಕರ್ ಹೌಸ್ ತೆರೆದು ವ್ಯಾಪಾರ ಮಾಡುತ್ತಿದ್ದ ಮದ್ಯದ ಅಂಗಡಿಯನ್ನು ಮಾಲೀಕರು ಸೋಮವಾರ ತಡರಾತ್ರಿ ಡೋರ್ ಕ್ಲೋಸ್ ಮಾಡಿ ಬಂದ್ ಮಾಡಲಾಗಿದೆ.
ಆದರೆ ಯಾವುದೇ ಕಾರಣಕ್ಕೋ ಲಿಕ್ಕರ್ ಹೌಸ್ ಓಪನ್ ಬ್ಯಾಡ್ ಅಂತಾ ಪ್ರತಿಭಟನೆ ಮುಂದುವರಿದ ಭಾಗವಾಗಿ ಸಭೆ ಸಹ ನವನಗರದಲ್ಲಿ ಎರಡೂ ಮದ್ಯದಂಗಡಿ ಮಾಲೀಕರ ಸಭೆ ನಡೆಸಲಾಗುವುದು. ಸುತ್ತಲಿನ ಬಡಾವಣೆ ನಾಗರಿಕರು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿ ಸಲಿದ್ದಾರೆ. ಲಿಕ್ಕರ್ ಹೌಸ್ ಮಾಲೀಕರಿಗೆ ಪಾಲಿಕೆ ಈಗಾಗಲೇ ನೋಟಿಸ್ ನೀಡಿ. ಕಾಲಮಿತಿಯೊಳಗೆ ಉತ್ತರ ಕೇಳಿದೆ. ನಂತರ ಪಾಲಿಕೆ ಕೆಎಂಸಿ ಕಾಯ್ದೆ ಅಡಿ ಕಟ್ಟಡ ತೆರವು ಮಾಡಲಿದೆ.
Life Style: ಮಾನಸಿಕವಾಗಿ ಕುಗ್ಗಿದ್ದೀರಾ..? ಡಿಪ್ರೆಶನ್ʼನಿಂದ ಹೊರ ಬರಲು ಇಲ್ಲಿದೆ ಪವರ್ ಫುಲ್ ಟಿಪ್ಸ್!
ಅಬಕಾರಿ ಇಲಾಖೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಎಚ್ಚೇತ್ತುಕೊಂಡು ಅಂಗಡಿ ಓಪನ್ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಜನವಸತಿ ಪ್ರದೇಶ, ಶಾಲೆ, ಧಾರ್ಮಿಕ ಸ್ಥಳ ಹಾಗೂ ಆಸ್ಪತ್ರೆ ಬಳಿ ಮದ್ಯದ ಅಂಗಡಿ ತೆರೆದು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ನವನಗರ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಸಹ ಆಕ್ರೋಶ ವ್ಯಕ್ತಪಡಿಸಿದ್ದರು.
‘ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸಿ, ಹಾಲಿನ ಅಂಗಡಿ ತೆರೆಯಲು ಪಾಲಿಕೆಯಿಂದ ಅನುಮತಿ ಪಡೆದು ಲಿಕ್ಕರ್ ಹೌಸ್ ತೆರೆದು ಮದ್ಯ ಮಾರಾಟಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ವೀರಶೈವ ಸಂಘಟನಾ ಸಮಿತಿ, ಈಶ್ವರ ದೇವಸ್ಥಾನ ಸಮಿತಿ, ಬನ್ನಿಮಹಾ ಕಾಳಿ ದೇವಸ್ಥಾನ ಸಮಿತಿ, ಅಪ್ಪಾಜಿ ಜನಸೇವಾ ಟ್ರಸ್ಟ್, ಜೈ ಕರ್ನಾಟಕ ಯುವಕಮಂಡಳ, ಕಾಳಿಕಾಂಬಾ ದೇವಿ ಮಹಿಳಾ ಮಂಡಳ, ನವಶಕ್ತಿ ಮಹಿಳಾ ಮಂಡಳ ನೇತೃತ್ವದಲ್ಲಿ ಪ್ರತಿಭಟನೆ ಸಹ ನಡೆಸಲಾಗಿತ್ತು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ಸುನೀತಾ ಮಾಳವದಕರ,ವಿಜಯಕುಮಾರ್ ಅಪ್ಪಾಜಿ, ರಮೇಶ ನಂದ್ಯಾಳ ಮುಂತಾದವರು ಭಾಗವಹಿಸಿದ್ದರು