ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣದ ಕೆಲಸಕ್ಕೆ ನವೆಂಬರ್ 22 ರಂದು ಭೂಮಿ ಪೂಜೆ ಮಾಡಿ ಕೆಲಸ ಪ್ರಾರಂಭಿಸಲಾಗುವುದು ಎಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವೇದಿಕೆ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಸಮಿತಿಗಳ ಕೆಲಸಕ್ಕಿಂತ ವೇದಿಕೆ ಸಮಿತಿಯ ಕೆಲಸ ಮುಖ್ಯವಾಗಿರುತ್ತದೆ. ಮುಖ್ಯ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆ ಮೂರು ವೇದಿಕೆಗಳಿಗೆ ಮೂರು ಜವಾಬ್ದಾರಿಯುತ ಅಧಿಕಾರಿಗಳನ್ನು ನಿಯೋಜಿಸಿ ಎಂದರು.
ವೇದಿಕೆಗಳ ನಿರ್ಮಾಣದ ಜೊತೆಗೆ ಪಾರ್ಕಿಂಗ್ ಸ್ಥಳ ನಿಗದಿಯಾಗಬೇಕು, ಮಾಧ್ಯಮ ಕೇಂದ್ರ, ವಸ್ತುಪ್ರದರ್ಶನ ಮಳಿಗೆ, ವಾಣಿಜ್ಯ ಮಳಿಗೆ, ಪುಸ್ತಕ ಮಳಿಗೆ, ಆಹಾರ ವಿತರಣೆಗೆ ಕೌಂಟರ್ ಗಳು ಸೇರಿದಂತೆ ವಿವಿಧ ಇಲಾಖೆಗಳು ನೀಡುವ ವಸ್ತುಪ್ರದರ್ಶನ ಮಳಿಗೆಗಳ ನಿರ್ಮಾಣ ಅಚ್ಚುಕಟ್ಟಾಗಿ ನಡೆಯಬೇಕು ಎಂದರು.
ಜಿಲ್ಲಾಧಿಕಾರಿ ಡಾ: ಕುಮಾರ ಅವರು ಮಾತನಾಡಿ ಮೈಸೂರು ಮಾರ್ಗವಾಗಿ ಬರುವವರಿಗೆ ಸತ್ವ ಬಳಿ ಹಾಗೂ ಬೆಂಗಳೂರು ಮಾರ್ಗವಾಗಿ ಬರುವವರಿಗೆ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.
Smartphone CCTV Camera: ಹಳೆ ಫೋನ್ ಬಳಸಿ, ಸಿಸಿಟಿವಿ ತಯಾರಿಸಿ! ಹೇಗೆ ಗೊತ್ತೆ..? ಇಲ್ಲಿದೆ ಟಿಕ್ಸ್
ಕಾರ್ಯಕ್ರಮ ನಡೆಯುವ ಪ್ರಾರಂಭಿಕ ಸ್ಥಳದಲ್ಲಿ ಮಹಿಳೆಯರು, ವಿಕಲಚೇತನರಿಗೆ ಸಹಾಯ ಒದಗಿಸಲು ಮಾಹಿತಿ ಕೇಂದ್ರ ತೆರೆಯಲಾಗುವುದು ಹಾಗೂ ಇದೇ ಸ್ಥಳದಲ್ಲಿ ಆರೋಗ್ಯದಲ್ಲಿ ತೊಂದರೆಯಾದಲ್ಲಿ ಚಿಕಿತ್ಸೆ ಬೀಡಲು ಆರೋಗ್ಯ ಕೇಂದ್ತ ತೆರೆಯಲಾಗುವುದು ಎಂದರು.
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮೂರು ಬೋರ್ ವೆಲ್ ಗಳನ್ನು ಗುರುತಿಸಲಾಗಿದೆ. ಬೋರ್ ವೆಲ್ ನಿಂದ ನೀರು ಪಂಪ್ ಆದ ನಂತರ ಶುದ್ಧಿಕರಿಸಿದ ನಂತರ ಟ್ಯಾಂಕ್ ಹಾಗೂ ಪೈಪ್ ಲೈನ್ ಸಹಾಯದಿಂದ ಕುಡಿಯಲು ಹಾಗೂ ಅಡುಗೆ ತಯಾರಿಕೆಗೆ ನೀರು ಒದಗಿಸಲಾಗುವುದು ಎಂದರು.
ಶೌಚಾಲಯಗಳಿಗೆ ಸ್ಥಳ ನಿಗದಿ ಮಾಡಿ ನಿರ್ಮಾಣ ಮಾಡಿ ಸಾರ್ವಜನಿಕರು ಹುಡುಕಾಡುವಂತಾಗಬಾರದು. ನೀರಿನ ಲಭ್ಯತೆಗೆ ಸರಿಯಾದ ವ್ಯವಸ್ಥೆ ಇರಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸಿಫ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಡಾ ಮೀರಾಶಿವಲಿಂಗಯ್ಯ,ಪಿ ಡಬ್ಲ್ಯೂ ಡಿ ಕಾರ್ಯಪಾಲಕ ಅಭಿಯಂತರ ಹರ್ಷ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ ಕೃಷ್ಣೇಗೌಡ ಹುಸ್ಕೂರು, ಹರ್ಷ ಪಣ್ಣೆದೊಡ್ಡಿ, ಅಪ್ಪಾಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.