ಬೆಂಗಳೂರು:- ಪೇ ಸಿಎಂ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರ ಸ್ಥಿತಿ ಅತಂತ್ರವಾಗಿದೆ. ಪೋಸ್ಟರ್ ಅಂಟಿಸಿದಾಗಿನಿಂದಲೂ ಕಾರ್ಯಕರ್ತರು ಕೋರ್ಟ್ ಅಲೆಯುತ್ತಿದ್ದಾರೆ.
ಪಕ್ಷದ ವಿರುದ್ಧವೇ ಕಾರ್ಯಕರ್ತರು ಅಸಮಧಾನಗೊಂಡಿದ್ದಾರೆ. ಕೋರ್ಟ್ ನಲ್ಲಿರುವ ತಮ್ಮ ಪೊಟೊ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಮಂತ್ರಿಗಳ ಮಕ್ಕಳು ಸಂಸತ್ತಿನಲ್ಲಿ, ಬಡವರ ಮಕ್ಳು ಕೋರ್ಟ್ ನಲ್ಲಿ, ಹೋಡಿರಿ ಚಪ್ಪಾಳೆ
ಇದೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಣ್ರೀ. ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿಟಿ ರವಿ ಕೇಸ್ ವಾಪಸ್ ತಗೊಂಡ ಸರ್ಕಾರ,ನಮ್ಮ ಕೇಸ್ ಗಳು ಕಣ್ಣಿಗೆ ಕಾಣಲಿಲ್ಲವೆ ಎಂದು ಸಂಜಯ್ ,ವಿಶ್ವ ಮೂರ್ತಿ ಆಕ್ರೋಶ ಹೊರ ಹಾಕಿದ್ದಾರೆ.