ಬೆಂಗಳೂರು: ಪ್ರತಿವರ್ಷ ನ. 19ನ್ನು ವಿಶ್ವ ಶೌಚಾಲಯ ದಿನವಾಗಿ ಆಚರಿಸುವ ಮೂಲಕ ಶುಚಿತ್ವದ ಕುರಿತು ಜಾಗೃತಿ ಜೊತೆ ಜಾಗತಿಕ ಶುಚಿತ್ವದ ಬಿಕ್ಕಟ್ಟಿನ ಜಾಗೃತಿ ಮೂಡಿಸಲಾಗುವುದು. ವಿಶ್ವಸಂಸ್ಥೆಯ ಅನುಸಾರ 3.6 ಮಿಲಿಯನ್ ಜನರು ಪ್ರಸ್ತುತ ಸುರಕ್ಷಿತವಾಗಿ ನಿರ್ವಹಿಸಲಾದ ಶುಚಿತ್ವ ಹೊಂದಿಲ್ಲ. ವಿಶ್ವಸಂಸ್ಥೆಯ ಅನುಸಾರ ವಿಶ್ವ ಶೌಚಾಲಯ ದಿನದಂದು ನೀರು ಮಹತ್ವದ್ದಾಗಿದೆ.
Smartphone CCTV Camera: ಹಳೆ ಫೋನ್ ಬಳಸಿ, ಸಿಸಿಟಿವಿ ತಯಾರಿಸಿ! ಹೇಗೆ ಗೊತ್ತೆ..? ಇಲ್ಲಿದೆ ಟಿಕ್ಸ್
ಸುರಕ್ಷಿತವಾಗಿ ನಿರ್ವಹಿಸಲಾದ ನೈರ್ಮಲ್ಯ ವ್ಯವಸ್ಥೆಗಳು ಅಂತರ್ಜಲವನ್ನು ಮಾನವ ತ್ಯಾಜ್ಯದಿಂದ ಕಲುಷಿತಗೊಳಿಸದಂತೆ ರಕ್ಷಿಸಬಹುದು. ಇದಕ್ಕಾಗಿ, ಮಾನವ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವ ಮತ್ತು ಸಂಸ್ಕರಿಸುವ ನೈರ್ಮಲ್ಯ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದ ಶೌಚಾಲಯಕ್ಕೆ ಪ್ರತಿಯೊಬ್ಬರೂ ಪ್ರವೇಶವನ್ನು ಹೊಂದಿರುವುದು ನಿರ್ಣಾಯಕವಾಗಿದೆ. ಅಂತರ್ಜಲದ ಮೇಲೆ ನೈರ್ಮಲ್ಯ ಬಿಕ್ಕಟ್ಟಿನ ಪ್ರಭಾವದ ಮೇಲೆ ಕೇಂದ್ರೀಕರಿಸಲು ವಿಶ್ವ ಶೌಚಾಲಯ ದಿನ 2024 ಅನ್ನು ಆಚರಿಸಲಾಗುತ್ತದೆ.
ವಿಶ್ವ ಶೌಚಾಲಯ ದಿನದ ಇತಿಹಾಸ:
ನವೆಂಬರ್ 19, 2001 ರಂದು ಸಿಂಗಾಪುರದ ಜ್ಯಾಕ್ ಸಿಮ್ ಅವರು ವಿಶ್ವ ಶೌಚಾಲಯ ಸಂಸ್ಥೆಯನ್ನು ಸ್ಥಾಪಿಸಿದರು ನಂತರ ಈ NGO ಸಂಸ್ಥೆಯ ಸ್ಥಾಪನೆಯ ದಿನವನ್ನು ವಿಶ್ವ ಶೌಚಾಲಯ ದಿನ ಎಂದು ಘೋಷಿಸಲಾಯಿತು. ಅದರ ನಂತರ ನೈರ್ಮಲ್ಯದ ಅಗತ್ಯತೆಯನ್ನು ಮನಗಂಡು 2013 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ವಿಶ್ವ ಶೌಚಾಲಯ ದಿನವನ್ನು ಅಧಿಕೃತವಾಗಿ ಆಚರಿಸಲು ಘೋಷಿಸಿತು.
ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ, ಜನರು ಬಯಲಿನಲ್ಲಿ ಮಲವಿಸರ್ಜನೆ ಮಾಡುವುದನ್ನು ತಡೆಯುವುದುದಾಗಿದೆ. ಬಯಲು ಮಲವಿಸರ್ಜನೆಯಿಂದ ಸೋಂಕುಗಳು, ಮತ್ತಿತರ ಮಾರಣಾಂತಿಕ ರೋಗಗಳು ಬರುವ ಅಪಾಯವಿದೆ. ಹಾಗಾಗಿ ಪ್ರಂಚದಾದ್ಯಂತ ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ ಮತ್ತು ಸುರಕ್ಷತಾ ನೀತಿಗಳನ್ನು ಬಲಪಡಿಸಲು ಈ ದಿನವನ್ನು ಆಚರಿಸುವುದು ಮುಖ್ಯವಾಗಿದೆ.
ವಿಶ್ವ ಶೌಚಾಲಯ ದಿನದ ಆಚರಣೆಯ ಮಹತ್ವ:
ವಿಶ್ವ ಸಂಸ್ಥೆಯ ವರದಿಯ ಪ್ರಕಾರ, ವಿಶ್ವದ 4.2 ಮಿಲಿಯನ್ ಜನರು ಮೂಲಭೂತ ಸುರಕ್ಷಿತ ನೈರ್ಮಲ್ಯ ಸೇವೆಗಳಿಂದ ವಂಚಿತರಾಗಿದ್ದಾರೆ. ಭಾರತದಲ್ಲಿನ 2011 ರ ಜನಗಣತಿಯ ಪ್ರಕಾರ, ಹಳ್ಳಿಗಳಲ್ಲಿ 67 ಶೇಕಡಾದಷ್ಟು ಹಾಗೂ ನಗರಗಳಲ್ಲಿ 13% ಶೇಕಡಾದಷ್ಟು ಕುಟುಂಬಗಳು ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ನೈರ್ಮಲ್ಯ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಭಾರತದಲ್ಲಿಯೂ ಸ್ವಚ್ಛತೆಗೆ ಸಂಬಂಧಿಸಿದ ಹಲವಾರು ಅಭಿಯಾನಗಳು ನಡೆಯುತ್ತಿವೆ. ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ವ್ಯಕ್ತಿಯು ಶೌಚಾಲಯವನ್ನು ಬಳಸುವುದು ಅತ್ಯಂತ ಮುಖ್ಯವಾಗಿದೆ.
ಅದರೊಂದಿಗೆ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಶೌಚಾಲಯದ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಶ್ವದ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಶೌಚಾಲಯ ದಿನವನ್ನು ಆಚರಿಸುವುದು ಮುಖ್ಯವಾಗಿದೆ. ಇಂದಿಗೂ ವಿಶ್ವದ ಲಕ್ಷಾಂತರ ಜನರು ಶೌಚಾಲಯಗಳನ್ನು ಬಳಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ 2030 ರ ವೇಳೆಗೆ ಜಗತ್ತಿನ ಎಲ್ಲಾ ಜನರಿಗೆ ಶೌಚಾಲಯ ಸೌಲಭ್ಯವನ್ನು ಕಲ್ಪಸಬೇಕು ಎಂಬುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.