ಆಫ್ರಿಕಾ ಖಂಡದ ನೈಜೀರಿಯಾ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಬಳಿಕ ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರೆಜಿಲ್ ನ ರಿಯೊ ಡಿ ಜನೈರೊಗೆ ತೆರಳಿದ್ದಾರೆ. ಈ ವೇಳೆ ಬ್ರೆಜಿಲ್ನಲ್ಲಿರುವ ಭಾರತೀಯ ಸಮುದಾಯವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತ ನೀಡಿ ಭರಮಾಡಿಕೊಂಡಿದ್ದಾರೆ.
ಮೋದಿ ಬ್ರೆಜಿಲ್ನ ರಿಯೊ ಡಿ ಜನೈರೊದಲ್ಲಿನ ಹೋಟೆಲ್ಗೆ ಆಗಮಿಸುತ್ತಿದ್ದಂತೆ ಅನಿವಾಸಿ ಭಾರತೀಯರು ‘ಮೋದಿ ಮೋದಿ’ ಘೋಷಣೆಗಳನ್ನು ಕೂಗುತ್ತಾ ಭಾರತೀಯ ಸಂಸ್ಕೃತಿಯಂತೆ ನೃತ್ಯ ಮೂಲಕ ಸ್ವಾಗತಿಸಿದರು.
ಬ್ರೆಜಿಲ್ ನ ವೇದ ವಿದ್ವಾಂಸರು ಪ್ರಧಾನಮಂತ್ರಿ ಮೋದಿಯವರ ಮುಂದೆ ವೇದ ಮಂತ್ರಗಳನ್ನು ಪಠಿಸಿದ್ದು ವಿಶೇಷವಾಗಿತ್ತು.