ಕೋಲಾರ:- ಕೋಲಾರ ನಗರದ ಎಸ್ಎನ್ಅರ್ ವೃತ್ತದಲ್ಲಿ ೫೩೭ ನೇ ಭಕ್ತ ಕನಕದಾಸರ ಜಯಂತೋತ್ಸವವನ್ನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ ಹಾಗೂ ಜಿಲ್ಲಾ ಕುರುಬರ ಸಂಘದ ಸಹಯೋಗದಲ್ಲಿ ಜಯಂತಿ ಆಚರಣೆಯನ್ನ ಮಾಡಲಾಯಿತು. ಕನಕ ಜಯಂತೋತ್ಸವಕ್ಕೆ ದೀಪ ಬೆಳಗಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಚಾಲನೆ ನೀಡಿದ್ರು.
ತಿಮ್ಮಪ್ಪನ ಭಕ್ತಾದಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಎರಡರಿಂದ ಮೂರು ಗಂಟೆಯಲ್ಲೇ ಸಿಗಲಿದೆ ದರ್ಶನ!
ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್, ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ ನಾಯಕರು ಸಿಎಂ ಸಿದ್ದರಾಮಯ್ಯ ಗುಣಗಾನ ಮಾಡಿದ್ರು. ಕುರಿ ಕಾಯುವವರು ರಾಜ್ಯದ ಸಿಎಂ ಆಗಿರೋದು ಹೆಮ್ಮೆಯ ವಿಚಾರ, ಅವರಿಂದಾಗಿಯೇ ಇಂದು ನಾನು ಕೋಲಾರದಲ್ಲಿ ಶಾಸಕನಾಗಿದ್ದೇನೆ ಅವರ ಆಶೀರ್ವಾದದಿಂದಲೆ ಇಂದು ನಾನು ಶಾಸಕನಾಗಿರೋದು ಎಂದು ಸಿದ್ದರಾಮಯ್ಯ ಕುರಿತು ಗುಣಗಾನ ಮಾಡಿದ್ರು.
ಕನಕ ಜಯಂತೋತ್ಸವದಲ್ಲಿ ಸಿಎಂ ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಸಂಸದ ಮಲ್ಲೇಶ್ ಬಾಬು, ಶಾಸಕ ಕೊತ್ತೂರು ಮಂಜುನಾಥ್, ಪರಿಷತ್ ಸದಸ್ಯರಾದ ಗೋವಿಂದರಾಜು, ಅನಿಲ್ ಕುಮಾರ್, ಮಾಜಿ ಸಂಸದ ಎಸ್ ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಡಿಸಿ ಅಕ್ರಂ ಪಾಷಾ, ಎಸ್ಪಿ ಗಳಾದ ಶಾಂತರಾಜು, ನಿಖಿಲ್ ಸೇರಿದಂತೆ ಕುರುಬ ಸಮಾಜದ ಮುಖಂಡರು ಭಾಗಿಯಾಗಿದ್ರು. ಇದೆ ವೇಳೆ ಕನಕ ದಾಸರ ಭಾವಚಿತ್ರಗಳನ್ನ ಹೊತ್ತ ಪಲ್ಲಕ್ಕಿಗಳು ಕೋಲಾರ ನಗರದ ಪ್ರಮುಖಂ ಬೀದಿಗಳಲ್ಲಿ ಸಂಚರಿಸಿದವು. ಇನ್ನೂ ಇದೆ ವೇಳೆ ಶಾಸಕ ಕೊತ್ತೂರು ಮಂಜುನಾಥ್, ಮಾಜಿ ಸಂಸದ ಎಸ್.ಮುನಿಸ್ವಾಮಿ ಭರ್ಜರಿ ಡಾನ್ಸ್ ಮಾಡಿ ಗಮನ ಸೆಳೆದ್ರು. ಕನಕ ಜಯಂತಿ ಮೆರವಣಿಗೆ ವೇಳೆ ಸಮಾಜದ ಮುಖಂಡರ ಜೊತೆ ತಮಟೆ ಸದ್ದಿಗೆ ಡ್ಯಾನ್ಸ್ ಮಾಡಿ ನಾಯಕರು ಗಮನ ಸೆಳೆದ್ರು.