ಬೆಂಗಳೂರು :- ರೇಷನ್ ಕಾರ್ಡ್ ರದ್ದಾಗಿದ್ರೆ ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡೋಣ ಎಂದು ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ.
ಸರ್ಕಾರ ರೇಷನ್ ಕಾರ್ಡ್ ಪರಿಶೀಲಿಸಬೇಕು, ಅನರ್ಹರಿಗೆ BPL ಕಾರ್ಡ್ ಸಿಗ್ತಿದೆ: ನಟ ಚೇತನ್!
ಈ ಸಂಬಂಧ ಮಾತನಾಡಿದ ಅವರು, ಅರ್ಹರ ಬಿಪಿಎಲ್, ಎಪಿಎಲ್ ಕಾರ್ಡ್ಗಳು ರದ್ದಾಗಿದ್ದರೆ, ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡ್ತೀವಿ ಎಂದರು.
ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿಂದು ನಡೆದ ಸಭೆಯಲ್ಲಿ ಸಾಕಷ್ಟು ಅಧಿಕಾರಿಗಳು, ಸಚಿವರು ಭಾಗಿಯಾಗಿದರು. ಸಭೆ ಪ್ರಾರಂಭವಾಗುತ್ತಿದ್ದಂತೆ ರೇಷನ್ ಕಾರ್ಡ್ ಗೊಂದಲದ ಬಗ್ಗೆ ಸಿಎಂ ಸಭೆಯಲ್ಲಿ ಚರ್ಚೆ ಶುರು ಮಾಡಿದರು. ಎಪಿಎಲ್-ಬಿಪಿಎಲ್ ಕಾರ್ಡ್ಗೆ ಸಂಬಂಧಿಸಿದಂತೆ ಗೊಂದಲ ನಿವಾರಣೆ ಮಾಡುವಂತೆ ಸಚಿವ ಮುನಿಯಪ್ಪಗೆ ಸಿಎಂ ಸೂಚನೆ ನೀಡಿದರು. ಬಿಪಿಎಲ್ ಕಾರ್ಡ್ ರದ್ದಾಗಿದೆ ಅಂತ ವಿಪಕ್ಷಗಳು ವಿವಾದ ಮಾಡ್ತಿವೆ. ಇದಕ್ಕೆ ಅಂಕಿ-ಅಂಶಗಳ ಸಮೇತ ಉತ್ತರ ಕೊಡಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಯಾವುದೂ ರದ್ದಾಗಿಲ್ಲ. ಆದಾಯ ತೆರಿಗೆ ಪಾವತಿ ಮಾಡೋರು ಮತ್ತು ಸರ್ಕಾರಿ ನೌಕರರಿಗೆ ಮಾತ್ರ ಕಡಿತ ಮಾಡಿದ್ದೇವೆ. ಬಿಪಿಎಲ್ ಕಾರ್ಡ್ಗೆ ಅರ್ಹತೆ ಇಲ್ಲದೇ ಇರೋರನ್ನ ಎಪಿಎಲ್ ಕಾರ್ಡ್ಗೆ ಶಿಫ್ಟ್ ಮಾಡ್ತಿದ್ದೇವೆ. ಕಾರ್ಡ್ ರದ್ದು ಮಾಡ್ತಿಲ್ಲ. 11 ಲಕ್ಷ ಕಾರ್ಡ್ ರದ್ದಾಗಿದೆ ಅನ್ನೋದು ಬಿಜೆಪಿ ಸುಳ್ಳಿನ ಆರೋಪ ಅಂತ ಸಿಎಂಗೆ ಮಾಹಿತಿ ನೀಡಿದರು.
ಇದೇ ವೇಳೆ ಅಧಿಕಾರಿಗಳ ಸಭೆ ಮಾಡಿ ಗೊಂದಲ ನಿವಾರಣೆ ಮಾಡುವಂತೆ ಮುನಿಯಪ್ಪಗೆ ಸಿಎಂ ಮತ್ತೆ ಸೂಚನೆ ನೀಡಿದರು, ಇದಕ್ಕೆ ಪ್ರತಿಕ್ರಿಯಿಸಿ, ಒಂದು ವೇಳೆ ಅರ್ಹರ ಕಾರ್ಡ್ ರದ್ದಾಗಿದ್ದರೆ ಮರು ಅರ್ಜಿ ಹಾಕೋ ವ್ಯವಸ್ಥೆ ಮಾಡ್ತೀವಿ ಎಂದರು.