ಬೀದರ್:- ರಾಜ್ಯ ಸರ್ಕಾರ ರೇಷನ್ ಕಾರ್ಡ್ ಪರಿಶೀಲಿಸಬೇಕು, ಅನರ್ಹರಿಗೆ BPL ಕಾರ್ಡ್ ಸಿಗ್ತಿದೆ ಎಂದು ನಟ ಚೇತನ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಯಾರಿಗೆ ಸಿಗಬೇಕೊ ಅವರಿಗೆ ಸಿಕ್ಕಿಲ್ಲ, ಅರ್ಹತೆ ಇಲ್ಲದವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿದೆ. ಹೀಗಾಗಿ ಮೊದಲು ಬಿಪಿಎಲ್ ಕಾರ್ಡ್ಗಳನ್ನು ಸರ್ಕಾರ ಪರಿಷ್ಕರಣೆ ಮಾಡಬೇಕು ಎಂದರು.
ಒಂದು ತಿಂಗಳ ಹಿಂದೆ ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನು ಪರಿಷ್ಕರಣೆ ಮಾಡುತ್ತಾರೆ ಎಂದಿದ್ದರು. ಆದರೆ ಇನ್ನೂ ಮಾಡಿಲ್ಲ. ಪರಿಷ್ಕರಣೆ ಮಾಡಿದರೆ ರೇಷನ್ ಕಾರ್ಡ್ ವಿಚಾರದಲ್ಲಿ ಏನಾಗಿದೆ ಎಂದು ಗೊತ್ತಾಗುತ್ತದೆ. ಆದರೆ ನಮಗೆ ಸಮಸ್ಯೆಯಾಗುತ್ತಿರುವುದು ಸರ್ಕಾರದ ನಿರಾಸಕ್ತಿ, ಸಮಸ್ಯೆಗೆ ಪರಿಹಾರ ನೀಡಬೇಕು ಎಂಬ ಮನಸ್ಥಿತಿ ಸರ್ಕಾರದಲ್ಲಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಇದು ಬಿಟ್ಟು ಬರೀ ವೈಯಕ್ತಿಕ ಟೀಕೆ ಮಾಡುವುದೆ ಆಗಿದೆ. ವೈಯಕ್ತಿಕ ಪ್ರತಿಷ್ಠೆಗಾಗಿ ರಾಜಕೀಯ ಮಾಡಿದರೆ ಉತ್ತಮ ಕೆಲಸಗಳು ಆಗಲ್ಲ. ಉಳ್ಳವರ ಬಳಿ ಬಿಪಿಎಲ್ ಕಾರ್ಡ್ಗಳು ಇದ್ದರೆ, ಅದನ್ನು ಕಿತ್ತುಕೊಂಡು ಬಂದು ಇಲ್ಲದವರಿಗೆ ಸರ್ಕಾರ ನೀಡಬೇಕು. ಪರಿಷ್ಕರಣೆ ಜೊತೆಗೆ ರೇಷನ್ ಕಾರ್ಡ್ಗಳ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.