ಹಾಸನ: ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ನಾನು ಒಪ್ಪಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಏನೇ ನಿಯಮಗಳನ್ನು ಮಾಡಬೇಕಾದರೆ ಮುಂಚೆಯೇ ತೀರ್ಮಾನ ಮಾಡಿಕೊಂಡು ಐಎಎಸ್, ಕೆಎಎಸ್ ಅಧಿಕಾರಿಗಳು, ಕಾರ್ಯದರ್ಶಿ ಎಲ್ಲರ ಒಮ್ಮತದ ಅಭಿಪ್ರಾಯ ತಗೊಂಡು ನಂತರ ನಿರ್ಧಾರ ತೆಗೆದುಕೊಳ್ಳಬೇಕು.
ಬೆಂಗಳೂರಿನ BEL ಕಂಪನಿಯಲ್ಲಿದೆ ಭರ್ಜರಿ ಉದ್ಯೋಗಾವಕಾಶ! ತಿಂಗಳಿಗೆ 2 ಲಕ್ಷ ಸಂಬಳ – ಇಂದೇ ಅರ್ಜಿ ಸಲ್ಲಿಸಿ
ಇನ್ನು ಈ ಹಿಂದೆಯೂ ಇದೇ ರೀತಿ ಆಗಿತ್ತು. ಅದನ್ನು ಬಗೆಹರಿಸುವಾಗ ಜನರಿಗೆ ಮಾತ್ರ ಯಾವುದೇ ತೊಂದರೆ ಕೊಡಲಿಲ್ಲ. ಇನ್ನು ಕೆಲವರು ಬಿಪಿಎಲ್ ಕಾರ್ಡ್ಗೆ ಅನರ್ಹತೆ ಇದ್ದವರು ತಾವಾಗಿಯೇ ಕಾರ್ಡ್ ಒಪ್ಪಿಸಿದ್ದರು. ಆದರೆ, ಈಗ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ನಾನು ಒಪ್ಪಲ್ಲ. ಇನ್ನು ವಾಲ್ಮೀಕಿ ಹಗರಣ ಸೇರಿದಂತೆ ಸಾಕಷ್ಟು ಹಗರಣಗಳು ಬೆಳಕಿಗೆ ಬಂದಿವೆ ಎಂದು ಹೇಳಿದರು.