ಬೆಂಗಳೂರು: ವಿಮಾನ ನಿಲ್ಧಾಣ ಮಾದರಿಯಲ್ಲಿ ಮೆಜೆಸ್ಟಿಕ್ ರೈಲು ನಿಲ್ದಾಣ ಅಭಿವೃದ್ಧಿ ಮಾಡುತ್ತೇವೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಅಭಿವೃದ್ಧಿಗೆ ಡಿಪಿಆರ್ ಸಿದ್ಧವಾಗಿದೆ. ರೈಲು ನಿಲ್ದಾಣ ಅಭಿವೃದ್ಧಿ ಬಗ್ಗೆ ರೈಲ್ವೆ ಮಂಡಳಿ ಕೆಲ ಸ್ಪಷ್ಟನೆ ಕೇಳಿದೆ. ಮುಂದಿನ ದಿನಗಳಲ್ಲಿ ರೈಲ್ವೆ ಮಂಡಳಿ ಮುಂದೆ ಇಡುತ್ತೇವೆ. ಒಳ್ಳೆಯ ಕೆಲಸಗಳಿಗೆ ಪ್ರಧಾನಿ ನರೇಂದ್ರ ಮೋದಿ ಬೇಡ ಎನ್ನುವುದಿಲ್ಲ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜೊತೆ ಚರ್ಚಿಸಿ ಕೆಲಸ ಆರಂಭಿಸುತ್ತೇವೆ ಎಂದರು. ಸುಮಾರು 1500 ಕೋಟಿ ರೂ. ವೆಚ್ಚದಲ್ಲಿ ಏರ್ಪೋರ್ಟ್ ಗಿಂತ ವಿಭಿನ್ನವಾಗಿ ಮೆಜೆಸ್ಟಿಕ್ ರೈಲು ನಿಲ್ದಾಣ ಅಭಿವೃದ್ಧಿ ಮಾಡುತ್ತೇವೆ. ಏರ್ಪೋರ್ಟ್ ನಲ್ಲಿ ಸಿಗುವ ಎಲ್ಲಾ ಸವಲತ್ತುಗಳು ಸಿಗಲಿದೆ. ನಮಗೆ 160 ಎಕರೆ ಜಾಗ ಇದೆ. ನಿರೋದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರೇ ಕೆಲ ಶಾಸಕರನ್ನು BJPಗೆ ಕಳಸಿದ್ರು: ಕೇಂದ್ರ ಸಚಿವ ಜೋಶಿ ಬಾಂಬ್
ಶಾಸಕ ರವಿ ಗಣಿಗ ಆರೋಪಕ್ಕೆ ಕಿಡಿ
ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂ. ಆಫರ್ ಎಂಬ ಶಾಸಕ ರವಿ ಗಣಿಗ ಆರೋಪ ವಿಚಾರವಾಗಿ ಮಾತನಾಡಿ, ರವಿ ಗಣಿಗ ಶಾಸಕರಾಗಿ ಉತ್ತಮ ಕೆಲಸ ಮಾಡಲಿ. ಹೀಗೆ ಆರೋಪ ಮಾಡೋದು ಅವರ ಗೌರವಕ್ಕೆ ತಕ್ಕುದಾದುದಲ್ಲ ಎಂದಿದ್ದಾರೆ. 40% ಆರೋಪ ಮಾಡಿದ್ರಲ್ವಾ, ಅದೇ ರೀತಿಯ ಆರೋಪ ಇದು ಎಂದರು. ಇದೇ ವೇಳೆ ಬಿಪಿಎಲ್ ಕಾರ್ಡ್ ರದ್ದು ಮಾಡಿರುವ ವಿಚಾರವಾಗಿ ಮಾತನಾಡಿ, ಈ ತರದ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಮಾಡಬಾರದು ಎಂದು ಹೇಳಿದ್ದಾರೆ. ಕೋವಿಡ್ ಹಗರಣ ತನಿಖೆ ವಿಚಾರವಾಗಿ ಮಾತನಾಡಿ, ಉಪ್ಪು ತಿಂದವರು ನೀರು ಕುಡಿತ್ತಾರೆ. ತನಿಖೆ ಮಾಡಲಿ ಬಿಡಿ ಎಂದಿದ್ದಾರೆ.