ಹುಬ್ಬಳ್ಳಿ: ಕಳೆದ ಬಾರಿ ಬಿಜೆಪಿ ಸರ್ಕಾರ ರಚನೆ ಮಾಡೋವಾಗ ಶಾಸಕ ರನ್ನು ಕಳಸಿದ್ದೆ ಸ್ವತ ಸಿದ್ದರಾಮಯ್ಯನವರು, ಹೀಗಂತ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೊಸ ಬಾಂಬ್ ಸಿಡಿದ್ದಾರೆ. ಕಾಂಗ್ರೆಸ್ ನವರಿಗೆ ಆಳೋಕೆ ನೈತಿಕತೆ ಇರಲಿಲ್ಲ, ಹೀಗಾಗಿ ನಾವು ಸರ್ಕಾರ ರಚನೆ ಮಾಡಿದ್ವೀ, ಈಬಾರಿ ಅವರಿಗೆ ಬಹುಮತ ಇದೆ. ಈ ಬಾರಿ ನಾವು ವಿರೋಧ ಪಕ್ಷವಾಗಿ ಕೆಲಸ ಮಾಡೋದು ನಮ್ಮ ಪಕ್ಷದ ನಿರ್ಧಾರ ಇದೆ ಎಂದು ಹೇಳಿದರು. ಅಂದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರೆಬಾರದು ಅನ್ನೋ ಕಾರಣಕ್ಕೆ ಶಾಸಕರನ್ನ ಕಳಿಸಿದ್ದೇ ಕಾಂಗ್ರೆಸ್ ಅಂತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೊಸ ಬಾಂಬ್ ಸಿಡಿದ್ದಾರೆ .
100 ಕೋಟಿ ಆಫರ್ ವಿಚಾರ
ಶಾಸಕ ರವಿ ಗಣಿಗ ದಾಖಲೆ ಇದ್ರೆ ಬಿಡುಗಡೆ ಮಾಡಲಿ ಎಂದ ಪ್ರಲ್ಹಾದ್ ಜೋಶಿ , ಅಂತವರ ವಿರುದ್ದ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳತ್ತೆ, ಈಗ ವಿಷಯ ಡೈವರ್ಟ್ ಮಾಡಲು ಸುಮ್ಮನೆ ಮಾತಾನಾಡುತ್ತಿದ್ದಾರೆ ಎಂದರು. ಅವರ ತಪ್ಪುಗಳನ್ನ ಡೈವರ್ಟ್ ಮಾಡೋಕೆ ಸಿಎಂ ಏನೇನೋ ಆರೋಪ ಮಾಡತೀದ್ದಾರೆ. ಸಿದ್ದರಾಮಯ್ಯ ಈಗಾಗಲೆ ಅನೇಕ ಹಗರಣಗಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ, ಹೀಗಾಗಿ ಬಾಯಿಗೆ ಬಂದಂತೆ ಮಾತಾಡತೀದ್ದಾರೆ. ಅಲ್ಲದೆ ಸಿದ್ದರಾಮಯ್ಯ ಸೇರಿ ಎಲ್ಲರೂ ಬಾಯಿಗೆ ಬಂದಂತೆ ಮಾತಾಡತೀದಾರೆ.
100 ಕೋಟಿ ಅಲ್ಲ, 500 ಕೋಟಿ ಬಗ್ಗೆ ಮಾತಾಡಲಿ, ದಾಖಲೆ ಇದ್ರೆ ಕೊಡಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳತೆ. ಶಾಸಕ ರವಿ ಗಣಿಗ ದಾಖಲೆ ಬಿಡುಗಡೆ ಮಾಡಲಿ ಎಲ್ಲವೂ ಸುಳ್ಳು ಇದೆ, ರವಿ ಗಣಿಗ ಈ ಹಿಂದೆ ಕೂಡಾ ಮಾತಾಡಿದ್ರು.ಇದೀಗ ಮತ್ತೆ ಪ್ಲೇಟ್ ಉಲ್ಟಾ ಮಾಡಿದ್ದಾರೆ. ದಾಖಲೆ ಇದ್ರೆ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನೆ ಮಾಡಿದ್ದಾರೆ.