ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಚಾಲಕ ಮತ್ತು ಕಂಡಕ್ಟರ್ ಗಳ ನಡುವೆ ಇರುವ ವಾಗ್ವಾದ ಹೆಚ್ಚಾಗಿ ನಡೆಯುತ್ತಿದೆ. ಅಲ್ಲದೇ ಕೆಲವು ಬಾರಿ ಹಲ್ಲೆಗಳು ಕೂಡ ನಡೆಯುತ್ತಿದೆ. ಅದರಂತೆ ಮತ್ತೊಂದು ಘಟನೆ ನಗರದಲ್ಲಿ ಜರುಗಿದೆ.
ಎಸ್, ಪಾಸ್ ತೋರಿಸಿ ಎಂದಿದ್ದಕ್ಕೆ ಬಿಎಂಟಿಸಿ ಬಸ್ ನಿರ್ವಾಹಕ ಮತ್ತು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಓರ್ವ ಪ್ರಯಾಣಿಕ ಮುಂದಾಗಿರುವಂತಹ ಘಟನೆ ನಡೆದಿದೆ.
ಹಲವು ಬಾರಿ ಪಾಸ್ ತೋರಿಸುವಂತೆ ಬಸ್ ನಿರ್ವಾಹಕ ಕೇಳಿದ್ದಾರೆ. ಎಷ್ಟು ಬಾರಿ ಕೇಳಿದ್ರೂ ಪಾಸ್ ತೋರಿಸಲ್ಲ ಅಂತಾ ಪ್ರಯಾಣಿಕ ವಾಗ್ವಾದ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಸಹ ಪ್ರಯಾಣಿಕರಿಗೂ ಆವಾಜ್ ಹಾಕಲಾಗಿದೆ. ಆದರೆ ನಿರ್ವಾಹಕ-ಪ್ರಯಾಣಿಕನ ವಾಗ್ವಾದಕ್ಕೆ ನಿಖರ ಮಾಹಿತಿ ಗೊತ್ತಾಗಿಲ್ಲ. ವಿಡಿಯೋ ಭಾರೀ ವೈರಲ್ ಆಗಿದೆ.