ಗದಗ:- ಜಿಲ್ಲೆಯಲ್ಲಿರುವ ತುಂಗಭದ್ರಾ ನದಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮೇಲಿಂದ ಮೇಲೊಂದರಂತೆ ಶವಗಳು ತೇಲಿ ಬರುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಟೀಮ್ ಇಂಡಿಯಾದ ದೊಡ್ಡ ಸಮಸ್ಯೆಯೇ ಕೋಚ್ ಗೌತಮ್ ಗಂಭೀರ್: ಗೇಲಿ ಮಾಡಿದ ಆಸ್ಟ್ರೇಲಿಯಾ!
ಅದರಂತೆ ಇಂದು ಕೂಡ ಒಂದು ಶವ ತೇಲಿ ಬಂದಿದ್ದು, ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿಯಲ್ಲಿರುವ ತುಂಗಭದ್ರಾ ನದಿಯಲ್ಲಿ ಪದೇ ಪದೇ ಹೆಣಗಳು ತೇಲಿ ಬರುತ್ತಿದ್ದು, ಇಲ್ಲಿನ ಜನತೆ ಬೆಚ್ಚಿ ಬಿದ್ದಿದ್ದಾರೆ.
ನವೆಂಬರ್ 5 ರಂದು ಮೂರು ಮಕ್ಕಳ ನದಿಗೆ ಎಸೆದು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಶವ ಪತ್ತೆಯಾಗಿದೆ.
ಇನ್ನೂ ಇದು ಆತ್ಮಹತ್ಯೆಯೋ, ಕೊಲೆಯೋ ಅನ್ನೋ ಅನುಮಾನ ಶುರುವಾಗಿದೆ. ಸುಮಾರು 40 ವರ್ಷದ ವ್ಯಕ್ತಿಯ ಶವ ಇದಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಶಂಕರಾವ್ ಟೇಲರ್, ಮುಂಡರಗಿ ಅಂತ ಲೇಬಲ್ ಇರೋ ಶರ್ಟ್ ಹಾಕಿರುವುದು ತಿಳಿದು ಬಂದಿದೆ.
ಕೂಡಲೇ ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.