ಹುಬ್ಬಳ್ಳಿ:- ಕರ್ನಾಟಕದಲ್ಲಿ 10 ಸಾವಿರ BPL ಕಾರ್ಡ್ ರದ್ದತಿ ವಿಚಾರ ಇದು ಇದು ಸರ್ಕಾರ ದಿವಾಳಿ ಆಗಿರುವುದಕ್ಕೆ ಸಾಕ್ಷಿ ಎಂದು ಕೇಂದ್ರ ಸಚಿವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಊಟ ಮಾಡುವಾಗ ಪದೇ-ಪದೇ ಕೂದಲು ಸಿಗುತ್ತಾ!? ಹಾಗಿದ್ರೆ ಶುಭವೋ, ಅಶುಭವೋ!?
ಈ ಸಂಬಂಧ ಮಾತನಾಡಿದ ಅವರು, ಕರ್ನಾಟಕದಾದ್ಯಂತ 10 ಸಾವಿರ ಬಿಪಿಎಲ್ ಕಾರ್ಡ್ಗಳನ್ನ ಎಪಿಎಲ್ ಕಾರ್ಡ್ಗಳಾಗಿ ಬದಲಾಯಿಸಿದೆ. ಈ 10 ಸಾವಿರ ಬಿಪಿಎಲ್ ಕಾರ್ಡ್ಗಳಿಗೆ ಸಿಗುತ್ತಿದ್ದ ಸವಲತ್ತನ್ನ ರದ್ದು ಮಾಡಿದೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಮೇಲೆ ಮುಗಿಬಿದ್ದಿದೆ. ಪ್ಲ್ಯಾನಿಂಗ್ ಇಲ್ಲದೇ ಗ್ಯಾರಂಟಿ ಘೋಷಿಸಿದ್ದೇ ಇಷ್ಟಕ್ಕೆಲ್ಲ ಕಾರಣ ಎಂದರು.
ಸರ್ಕಾರ ದಿವಾಳಿಯಾಗುತ್ತಿರುವುದರಿಂದ ಬಿಪಿಎಲ್ ಕಾರ್ಡ್ ಕಡಿತ ಮಾಡಲಾಗುತ್ತಿದೆ. ದಿಢೀರ್ ಆಗಿ ಬಿಪಿಎಲ್ ಕಾರ್ಡ್ ಏಕೆ ಕಡಿತ ಮಾಡುತ್ತಿದೆ ಗೊತ್ತಿಲ್ಲ. ಪ್ಲ್ಯಾನಿಂಗ್ ಇಲ್ಲದೇ ಗ್ಯಾರಂಟಿ ಘೋಷಿಸಿದ್ದೇ ಇಷ್ಟಕ್ಕೆಲ್ಲ ಕಾರಣ ಎಂದು ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ನುಡಿದಂತೆ ನಡೆದಿದ್ದೇವೆ ಅಂತಾರೆ. ಆದರೆ ಒಂದೂ ಗ್ಯಾರಂಟಿ ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಗ್ಯಾರಂಟಿ ಕೊಡಲು ಆಗದೇ ಬಿಡಲೂ ಆಗದ ಸ್ಥಿತಿ ಸರ್ಕಾರದ್ದು. ಬಹುತೇಕ ಎಲ್ಲ ಗ್ಯಾರಂಟಿಗಳು ಅರ್ಧಕ್ಕೆ ನಿಂತಿವೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯತ್ತ ಮುಖಮಾಡಿದೆ ಎಂದಿದ್ದಾರೆ.