ರಾಯಚೂರು:- ಚಿಲ್ಲರೆಗಳು ರಾಜಕಾರಣಕ್ಕೆ ಬಂದು ನಮ್ಮ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ ಎಂದು ಇಬ್ರಾಹಿಂ ಬೇಸರ ಹೊರ ಹಾಕಿದ್ದಾರೆ.
18 ವರ್ಷದ ಯುವತಿ ಸೂಸೈಡ್: ಬೆಂಗಳೂರಿಗೆ ದುಡಿಯಲು ಬಂದವರು ನೇಣಿಗೆ ಶರಣಾಗಿದ್ಯಾಕೆ!?
ಈ ಸಂಬಂಧ ಮಾತನಾಡಿದ ಅವರು, ಮಂತ್ರಾಲಯ ಮಠದ ಜಾಗ ಆದೊನಿ ನವಾಬರು ಕೊಟ್ಟಿದ್ದು, ಅದನ್ನು ಹೇಗೆ ವಕ್ಫ್ ಬೋರ್ಡ್ ಆಸ್ತಿ ಎಂದು ಯಾರದರೂ ಕೇಳಲು ಹೋಗಿದ್ರಾ? ರಾಘವೇಂದ್ರ ಸ್ವಾಮಿಗಳು ಮಂತ್ರಾಲಯಕ್ಕೆ ಬಂದಾಗ ನಮ್ಮ ಬೃಂದಾವನ ಇಲ್ಲಿ ಮಾಡುತ್ತೇವೆ ಎಂದು ಹೇಳಿದ್ದರು.
ಆಗ ಮಂತ್ರಾಲಯವನ್ನು ಖಾಜಿಗೆ ಕೊಟ್ಟ ಜಾಗ ರದ್ದುಗೊಳಿಸಿ, ಆದೊನಿ ನವಾಬರು ಮಂತ್ರಾಲಯ ಸ್ವಾಮೀಜಿಗೆ ಕೊಟ್ಟರು. ಈ ಕಥೆಯನ್ನ ಮಂತ್ರಾಲಯ ಸ್ವಾಮೀಜಿಗಳೇ ಹೇಳುತ್ತಾರೆ ಎಂದು ಹೇಳಿದ್ದಾರೆ.
ಶೃಂಗೇರಿ ಶಾರದಾ ಪೀಠದ ಮೇಲೆ ಪೇಶಾವರರು ದಾಳಿಗೆ ಬಂದಾಗ ಟಿಪ್ಪು ಸುಲ್ತಾನ್ ಸೈನ್ಯ ಕಳುಹಿಸಿ ಮತ್ತೆ ಶಾರದಾ ಪೀಠವನ್ನ ಸ್ಥಾಪನೆ ಮಾಡಿದ್ದರು. ಇದು ಇತಿಹಾಸ, ಇದು ನಮ್ಮ ಪರಂಪರೆ, ಇದು ನಮ್ಮ ಸಂಸ್ಕೃತಿ. ಈ ಚಿಲ್ಲರೆಗಳು ರಾಜಕಾರಣಕ್ಕೆ ಬಂದು ಈ ಸಂಸ್ಕೃತಿಯನ್ನ ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.